ಸೋಮವಾರ, ಜನವರಿ 20, 2020
17 °C
ದೂರು ನೀಡಿದರೆ ಅಪಹರಿಸುವುದಾಗಿ ಬೆದರಿಕೆ

ಮಹಿಳೆಗೆ ಅಶ್ಲೀಲ ಚಿತ್ರ ಕಳುಹಿಸಿದ ಅಪರಿಚಿತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 33 ವರ್ಷದ ಮಹಿಳೆಗೆ ಅಪರಿಚಿತನೊಬ್ಬ ಮೊಬೈಲ್‌ ವಾಟ್ಸ್‌ ಆ್ಯಪ್‌ನಲ್ಲಿ ಅಶ್ಲೀಲ ಚಿತ್ರ ಮತ್ತು ಸಂದೇಶ ಕಳುಹಿಸಿ, ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ.

ಹೊಸಪಾಳ್ಯ ಮುಖ್ಯರಸ್ತೆ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿರುವ ಸುರೇಶ್‌ ಎಂಬುವರು ಬಂಡೆಪಾಳ್ಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಅಪರಿಚಿತನೊಬ್ಬ ತಮ್ಮ ಪತ್ನಿ ಮೊಬೈಲ್‌ಗೆ ಅಶ್ಲೀಲ ಚಿತ್ರ ಮತ್ತು ಸಂದೇಶಗಳನ್ನು ಕಳುಹಿಸುತ್ತಿದ್ದಾನೆ. ಪತ್ನಿ ಮೊಬೈಲ್‌ ಹ್ಯಾಕ್‌ ಮಾಡಿ ಅದರಲ್ಲಿರುವ ಫೋನ್‌ ನಂಬರ್‌ಗಳಿಗೆ ನಮ್ಮ ಫೋಟೋಗಳನ್ನು ಕಳುಹಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ನಾನು ಮತ್ತು ಪತ್ನಿ ಹೊರಗಡೆ ಹೋದಾಗ ಹಿಂಬಾಲಿಸಿ, ನಮ್ಮ ಫೋಟೋಗಳನ್ನು ತೆಗೆದು ನಮಗೇ ಕಳುಹಿಸುತ್ತಿದ್ದಾನೆ. ಹೀಗೆ ಮಾಡುವುದನ್ನು ನಿಲ್ಲಿಸದಿದ್ದರೆ ದೂರು ಕೊಡುವುದಾಗಿ ಎಚ್ಚರಿಸಿದ ಬಳಿಕ, ಪತ್ನಿಯನ್ನು ಅಪಹರಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

ಆರೋ‍ಪಿ ಕಿರುಕುಳ ಸಹಿಸಲಾಗದೆ ದೂರು ನೀಡುತ್ತಿರುವುದಾಗಿ ಸುರೇಶ್‌ ವಿವರಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ ಬಳಿಕವೂ ಅಶ್ಲೀಲ ಚಿತ್ರ ಹಾಗೂ ಸಂದೇಶಗಳು ಬರುತ್ತಿವೆ. ಆತ ಕಳುಹಿಸುವ ಸಂದೇಶಗಳು ಅತ್ಯಂತ ಅಸಹ್ಯವಾಗಿವೆ ಎಂದು  ಅವರು ತಿಳಿಸಿದ್ದಾರೆ.

ಅಪರಿಚಿತ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಬಂಧಿಸಲಾಗುವುದು. ಆನಂತರವಷ್ಟೆ ಆಡೋಪಿಯು ಪಿರ್ಯಾದಿಗೆ ಪರಿಚಿತನೇ? ಯಾವ ಉದ್ದೇಶದಿಂದ ಅಶ್ಲೀಲ ಚಿತ್ರ ಮತ್ತು ಸಂದೇಶ ಕಳುಹಿಸುತ್ತಿದ್ದಾನೆ ಎಂದು ಹೇಳಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು