ಬೆಂಗಳೂರು: ಕರ್ನಾಟಕ ಬೀದಿ ನಾಟಕ ಅಕಾಡೆಮಿಯಿಂದ ಸಿಜಿಕೆ ಬೀದಿರಂಗ ದಿನಾಚರಣೆಯ ಪ್ರಯುಕ್ತ ಮೂರು ದಿನಗಳ ಒಡಲಾಳ ನಾಟಕೋತ್ಸವ, ಸಿಜಿಕೆ ರಂಗ ಪುರಸ್ಕಾರ ಕಾರ್ಯಕ್ರಮ ಇದೇ 25ರಿಂದ 27ರವರೆಗೆ ಮೂರು ದಿನಗಳ ಕಾಲ ಜಾಲಹಳ್ಳಿ ಕುವೆಂಪು ಕಲಾಕ್ಷೇತ್ರದಲ್ಲಿ ನಡೆಯಲಿದೆ.
25ರಂದು ಸಂಜೆ 6.30ಕ್ಕೆ ರಂಗವರ್ಣ ಬೆಂಗಳೂರು ಕಲಾವಿದರು ‘ಸಂಜೀವಿನಿ’ ನಾಟಕ ಪ್ರದರ್ಶಿಸಲಿದ್ದಾರೆ. 26ರಂದು ಸಂಜೆ 6.30ಕ್ಕೆ ರೂಪಾಂತರ ತಂಡದಿಂದ ‘ಚೋಮನ ದುಡಿ’ ನಾಟಕ ಪ್ರದರ್ಶನಗೊಳ್ಳಲಿದೆ.
27ರಂದು ಸಿಜಿಕೆ ಪ್ರಶಸ್ತಿ ಪ್ರದಾನ ನಡೆಯಲಿದೆ. ರಂಗ ನಿರ್ದೇಶಕರಾದ ಕೆಎಸ್‌ಡಿಎಲ್ ಚಂದ್ರು, ಕೃಷ್ಣಮೂರ್ತಿ ಕವತಾರ್, ಶಂಕರಪ್ಪ ಕೆ.ಜೆ. ಅವರಿಗೆ ಕ್ರಮವಾಗಿ 2021, 2022 ಮತ್ತು 2023ನೇ ಸಾಲಿನ ಸಿಜಿಕೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.