ಗುರುವಾರ , ಆಗಸ್ಟ್ 18, 2022
22 °C

ಬೆಂಗಳೂರು: ನಾಯಿಗಳ ದಾಳಿ; ವೃದ್ಧೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿ ನಾಯಿ‌ ಕಚ್ಚಿ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. 'ವೃದ್ಧೆ ಹೆಸರು ತಿಳಿದು ಬಂದಿಲ್ಲ. 60ರಿಂದ 65 ವರ್ಷ ಪ್ರಾಯವಾಗಿರಬಹುದು' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

'ವೃದ್ಧೆ, ನಿರ್ಗತಿಕರೆಂದು ಸ್ಥಳೀಯರು ಹೇಳುತ್ತಿದ್ದಾರೆ.  ಶುಕ್ರವಾರ ರಾತ್ರಿ ವೃದ್ಧೆ ನಡೆದುಕೊಂಡು ಹೊರಟಿದ್ದರು. ಅವರನ್ನು ನಾಯಿಗಳು ಬೆನ್ನಟ್ಟಿದ್ದವು. ಸ್ಥಳೀಯರೇ ನಾಯಿಗಳನ್ನು ಓಡಿಸಿದ್ದರು.'

ಇದನ್ನೂ ಓದಿ: 

'ರಾತ್ರಿ ಪುನಃ ನಾಯಿಗಳು ವೃದ್ಧೆ ಮೇಲೆ‌ ದಾಳಿ ಮಾಡಿ ಕಚ್ಚಿವೆ. ಅದರಿಂದ ತೀವ್ರ ಗಾಯಗೊಂಡು ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ‌ ಬಗ್ಗೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ' ಎಂದೂ ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು