ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಗೇಮಿಂಗ್‌ ಕಾನೂನುಬದ್ಧ: ಸಮೀರ್‌ ಬರ್ದೆ

Last Updated 23 ಫೆಬ್ರುವರಿ 2021, 20:51 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಆನ್‌ಲೈನ್‌ ರಮ್ಮಿ ಉದ್ಯಮದ ಮೇಲೆ ಸ್ವಯಂ ನಿಯಂತ್ರಣ ಹೊಂದಿರುವ ‘ದಿ ಆನ್‌ಲೈನ್‌ ರಮ್ಮಿ ಫೆಡರೇಷನ್‌ (ಟಾರ್ಫ್‌)’ ಕಾನೂನು ಬದ್ಧ ಆನ್‌ಲೈನ್‌ ಆಟದ ಕುರಿತು ಆಟಗಾರರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದು ಇದಕ್ಕಾಗಿ #ಟಾರ್ಫ್‌ ಹೈ ತೋ ಸೇಫರ್‌ ಹೈ ಎಂಬ ಅಭಿಯಾನ ಆರಂಭಿಸಿದೆ.

ಈ ಕುರಿತು ಮಾತನಾಡಿರುವ ಟಾರ್ಫ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸಮೀರ್‌ ಬರ್ದೆ ‘ಆನ್‌ಲೈನ್‌ ರಮ್ಮಿ ಉದ್ಯಮವು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಇದು ಕಾನೂನು ಬದ್ಧವಾದ ಆಟ. ಇದರ ಬಗ್ಗೆ ಅನೇಕರಲ್ಲಿ ತಪ್ಪು ತಿಳಿವಳಿಕೆ ಇದೆ. ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹೊಸ ಅಭಿಯಾನ ಕೈಗೊಂಡಿದ್ದೇವೆ’ ಎಂದರು.

‘ರಮ್ಮಿ ಜೂಜಾಟವಲ್ಲ. ಇದು ಕೌಶಲ ಕೇಂದ್ರಿತ ಆಟ. ರಾಜ್ಯ ಸರ್ಕಾರಗಳು ಇದನ್ನು ನಿಷೇಧಿಸಲು ಮುಂದಾಗಿರುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT