ಬುಧವಾರ, ಸೆಪ್ಟೆಂಬರ್ 22, 2021
21 °C

ಆನ್‌ಲೈನ್‌ನಲ್ಲಿ ಈರುಳ್ಳಿ: ₹ 2.25 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆನ್‌ಲೈನ್‌ ಮೂಲಕ ಈರುಳ್ಳಿ ಖರೀದಿಸಲು ಮುಂದಾಗಿದ್ದ ನಗರದ ನಿವಾಸಿಯೊಬ್ಬರು, ₹ 2.25 ಲಕ್ಷ ಕಳೆದುಕೊಂಡಿದ್ದಾರೆ. ಈ ಬಗ್ಗೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಜೆ.‍ಪಿ. ನಗರದ ಆರ್‌ಬಿಐ ಲೇಔಟ್ ನಿವಾಸಿ 43 ವರ್ಷದ ಚೇತನ್ ದೂರು ನೀಡಿದ್ದಾರೆ. ಅಪರಿಚಿತ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವ್ಯಾಪಾರಿಯಾಗಿದ್ದ ದೂರುದಾರ, ಫೇಸ್‌ಬುಕ್‌ ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿದ್ದಾರೆ. ಈರುಳ್ಳಿ ಮಾರಾಟಗಾರನೆಂದು ಹೇಳಿದ್ದ ವ್ಯಕ್ತಿಯೊಬ್ಬರು ದೂರುದಾರರನ್ನು ಪರಿಚಯಿಸಿಕೊಂಡಿದ್ದ. ಸಗಟು ಬೆಲೆಯಲ್ಲಿ ಈರುಳ್ಳಿ ಮಾರುವುದಾಗಿ ಹೇಳಿದ್ದ.’

‘ಈರುಳ್ಳಿ ಮಾದರಿ ಕಳುಹಿಸುವಂತೆ ದೂರುದಾರ ಕೇಳಿದ್ದರು. ಈರುಳ್ಳಿ ಫೋಟೊಗಳನ್ನು ಆರೋಪಿ ಕಳುಹಿಸಿದ್ದ. ಮುಂಗಡವಾಗಿ ಹಣ ಜಮೆ ಮಾಡುವಂತೆಯೂ ಹೇಳಿದ್ದ. ಅದನ್ನು ನಂಬಿದ್ದ ದೂರುದಾರ, ಆರೋಪಿ ಹೇಳಿದ್ದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ₹ 2.25 ಲಕ್ಷ ಜಮೆ ಮಾಡಿದ್ದರು. ಹಣ ಪಡೆದ ಆರೋಪಿ, ಈರುಳ್ಳಿ ಕಳುಹಿಸದೇ ವಂಚಿಸಿದ್ದಾನೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು