ಬೆಂಗಳೂರು: ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕವು ಇದೇ 19 ಮತ್ತು 20ಕ್ಕೆ ಲಾಲ್‌ಬಾಗ್‌ನ ಡಾ.ಎಂ.ಎಚ್. ಮರಿಗೌಡ ಸಭಾಂಗಣದಲ್ಲಿ ಏಳನೇ ಆರ್ಕಿಡ್ ಪ್ರದರ್ಶನ ಆಯೋಜಿಸಿದೆ.

ಎರಡು ದಿನದ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆಯ ನಿರ್ದೇಶಕ ಬಿ. ವೆಂಕಟೇಶ್ ಉದ್ಘಾಟಿಸಲಿದ್ದಾರೆ. ಇಲಾಖೆಯ ಜಂಟಿ ನಿರ್ದೇಶಕ ಎಂ. ಜಗದೀಶ್ ಅವರು ವಿಶೇಷ ಸ್ಮಾರಕವನ್ನು ಅನಾವರಣ ಮಾಡಲಿದ್ದಾರೆ.ಸ್ಮಾರಕದಲ್ಲಿ ಆರ್ಕಿಡ್‌ಗಳ ಬಗ್ಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತಜ್ಞರ ಲೇಖನಗಳು ಇರುತ್ತವೆ.ಪ್ರದರ್ಶನವು ಆರ್ಕಿಡ್‌ಗಳ ವೈವಿಧ್ಯ ಹಾಗೂ ವೈಶಿಷ್ಟ್ಯವನ್ನು ಅನಾವರಣ ಮಾಡಲಿದೆ.

‘ಭಾರತೀಯ ಮತ್ತು ವಿದೇಶಿ ಆರ್ಕಿಡ್ ತಳಿಗಳು ಪ್ರದರ್ಶನದಲ್ಲಿ ಇರಲಿವೆ. ಆರ್ಕಿಡ್ ಬೆಳೆಸುವ ಬಗ್ಗೆ ತರಬೇತಿ ಹಾಗೂ ಮಾರ್ಗದರ್ಶನವನ್ನು ನೀಡಲಾಗುತ್ತದೆ. ಈ ಹೂವು ಬಣ್ಣ, ಆಕಾರ ಮತ್ತು ಗಾತ್ರಗಳಲ್ಲಿ ವೈವಿಧ್ಯ ಇರುತ್ತದೆ. ಬೇರೆ ಯಾವ ಹೂಗಳು ಸಹ ಇದಕ್ಕೆ ಸರಿಸಾಟಿಯಾಗಲಾರವು’ ಎಂದು ಆಯೋಜಕರು ತಿಳಿಸಿದ್ದಾರೆ.

ಆರ್ಕಿಡ್ ಗಿಡ ಹಾಗೂ ಹೂವುಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆಯಿದ್ದು, ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ವ್ಯಾಪಾರದ ದೃಷ್ಟಿಯಿಂದಲೂ ಲಾಭದಾಯಕವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.