ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗಕ್ಕೆ ಮೂರನೇ ರೈಲು ಪಶ್ಚಿಮ ಬಂಗಾಳದ ಟಿಟಾಗಢ ರೈಲ್ ಸಿಸ್ಟಂ ಲಿಮಿಟೆಡ್ (ಟಿಆರ್ಎಸ್ಎಲ್) ಕಾರ್ಯಾಗಾರದಲ್ಲಿ ಸಿದ್ಧವಾಗಿದ್ದು, ಅದರ ಮೂರು ಕೋಚ್ಗಳನ್ನು ರವಾನಿಸುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಒಂದು ರೈಲು ಆರು ಕೋಚ್ಗಳನ್ನು ಹೊಂದಿರುತ್ತದೆ. ಅದರಲ್ಲಿ ಮೂರು ಕೋಚ್ಗಳನ್ನು ಹೊತ್ತ ಲಾರಿಗಳು ಬೆಂಗಳೂರು ಕಡೆಗೆ ಬುಧವಾರ ಹೊರಟವು. ಉಳಿದ ಮೂರು ಕೋಚ್ಗಳನ್ನು ಮೇ 2ರಂದು ರವಾನಿಸಲಾಗುವುದು ಎಂದು ಕಾರ್ಯಾಗಾರದಿಂದ ಮಾಹಿತಿ ಬಂದಿರುವುದಾಗಿ ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಮೇ 15ರ ಒಳಗೆ ಎಲ್ಲ ಆರು ಕೋಚ್ಗಳು ಹೆಬ್ಬಗೋಡಿಯಲ್ಲಿರುವ ‘ನಮ್ಮ ಮೆಟ್ರೊ’ ಡಿಪೊ ತಲುಪಲಿವೆ. ಮೂರನೇ ರೈಲು ಬಂದ ಮೇಲೆ ಶೀಘ್ರವಾಗಿ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.