ಸೋಮವಾರ, ನವೆಂಬರ್ 18, 2019
29 °C
ಪರಮೇಶ್ವರ ಆಪ್ತ ಸಹಾಯಕ ರಮೇಶ್ ನಿಗೂಢ ಸಾವು ಪ್ರಕರಣ

ಅಧಿಕಾರಿಗಳಿಗೆ ಪೊಲೀಸರ ನೋಟಿಸ್

Published:
Updated:

ಬೆಂಗಳೂರು: ಶಾಸಕ ಜಿ.ಪರಮೇಶ್ವರ ಅವರ ಆಪ್ತ ಸಹಾಯಕ ರಮೇಶ್ ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ಜ್ಞಾನಭಾರತಿ ಠಾಣೆ ಪೊಲೀಸರು, ರಮೇಶ್ ಮನೆ ಮೇಲೆ ದಾಳಿ ನಡೆಸಿದ್ದ ಬಗ್ಗೆ ಮಾಹಿತಿ ನೀಡುವಂತೆ ಐ.ಟಿ ಅಧಿಕಾರಿಗಳಿಗೆ ನೋಟಿಸ್‌ ನೀಡಿದ್ದಾರೆ.

‘ಮೊನ್ನೆ ನನ್ನ ಮನೆಯಲ್ಲಿ ನಡೆದ ಐ.ಟಿ ದಾಳಿಯಿಂದ ನಾನು ದಿಗ್ಭ್ರಾಂತನಾಗಿದ್ದೇನೆ. ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂಬುದಾಗಿ ರಮೇಶ್ ಬರೆದಿದ್ದಾರೆ ಎನ್ನಲಾದ ಮರಣಪತ್ರವೂ ಪೊಲೀಸರಿಗೆ ಸಿಕ್ಕಿತ್ತು.

ಮರಣಪತ್ರದಲ್ಲಿರುವ ಅಂಶವನ್ನೇ ಉಲ್ಲೇಖಿಸಿ ಐ.ಟಿ ಅಧಿಕಾರಿಗಳಿಗೆ ನೋಟಿಸ್‌ ಕಳುಹಿಸಿರುವ ಪೊಲೀಸರು, ‘ರಮೇಶ್‌ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಯಾರು? ಅವರೇನಾದರೂ ರಮೇಶ್‌ಗೆ ಕಿರುಕುಳ ನೀಡಿದ್ದಾರೆಯೆ? ಹಾಗೂ ದಾಳಿಯ ವಿವರವನ್ನು ನೀಡಿ’ ಎಂದು ಕೋರಿದ್ದಾರೆ.   

ಪ್ರತಿಕ್ರಿಯಿಸಿ (+)