ಬೆಂಗಳೂರು: ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆ ವಿಸ್ತರಿಸಲು ಬಿಬಿಎಂಪಿ ಸಿಬ್ಬಂದಿ ಅರಮನೆ ಮೈದಾನದಲ್ಲಿನ 15 ಎಕರೆ 39 ಗುಂಟೆ ಭೂಮಿಯ ಸರ್ವೆ ನಡೆಸಿದರು.

ಸರಿಯಾದ ವಿಸ್ತೀರ್ಣ ವರದಿ (ಸಿಡಿಆರ್)ಯನ್ನು ಸಿದ್ಧಪಡಿಸಲು ಈ ಸರ್ವೆ ಕೈಗೊಳ್ಳಲಾಯಿತು. ಇದು ಎಷ್ಟು ಭೂಮಿಗೆ ಪರಿಹಾರ ನೀಡಬೇಕು ಎಂಬುದನ್ನು ನಿರ್ಧರಿಸಲು ಸಹಕಾರಿಯಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಬಿಬಿಎಂಪಿ ಅಧಿಕಾರಿಗಳು ಇತರೆ ಇಲಾಖೆಗಳ ಸಿಬ್ಬಂದಿಯೊಂದಿಗೆ ಸರ್ವೆ ಉಪಕರಣಗಳೊಂದಿಗೆ ಸಮೀಕ್ಷೆ ನಡೆಸಿದರು. ‘ಅರಮನೆ ಅಡ್ಡರಸ್ತೆ ಹಾಗೂ ಮೇಖ್ರಿ ವೃತ್ತದ ಅಂಡರ್‌ಪಾಸ್ ನಿರ್ಮಾಣಕ್ಕಾಗಿ ಈ ಹಿಂದೆ ಅರಮನೆ ಮೈದಾನವನ್ನು ಎರಡು ಬಾರಿ ಉಪಯೋಗಿಸಿಕೊಳ್ಳಲಾಗಿದೆ. ಇದೀಗ ನಾವು ಕಾಂಪೌಂಡ್‌ನಿಂದ ರಸ್ತೆವರೆಗಿರುವ ಖಾಲಿ ಭೂಮಿಯನ್ನು ನಾವು ಅಳತೆ ಮಾಡುತ್ತಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಗೊಂಡ ನಿವೇಶನಗಳ ಸ್ವಾಧೀನ ನೀಡುವ ಮುನ್ನ ಸಿಡಿಆರ್ ಮೂಲಕ ವರದಿಗಳನ್ನು ತಯಾರಿಸುತ್ತದೆ. ಅದರಂತೆ ಬಿಬಿಎಂಪಿ ಅರಮನೆ ಮೈದಾನದ ಭೂಮಿಯ ಸರ್ವೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.