ಬುಧವಾರ, ಆಗಸ್ಟ್ 17, 2022
29 °C

ರಸ್ತೆಯಲ್ಲೇ ಮದ್ಯದ ಪಾರ್ಟಿ ಪ್ರಶ್ನಿಸಿದ್ದಕ್ಕೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಸ್ತೆಯಲ್ಲೇ ಮದ್ಯ ಸೇವಿಸಿ ಪಾರ್ಟಿ ಮಾಡುತ್ತಿದ್ದದ್ದನ್ನು ಪ್ರಶ್ನಿಸಿದ್ದ ದೇವೇಂದ್ರ ಎಂಬುವರ ಮೇಲೆ ಹಲ್ಲೆ ಮಾಡಲಾಗಿದ್ದು, ಈ ಸಂಬಂಧ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸ್ಥಳೀಯ ಪಟಿಯಾರ್ ತಂದೂರ್ ಹೋಟೆಲ್ ಮಾಲೀಕರಾಗಿರುವ ದೇವೇಂದ್ರ ಅವರು ಘಟನೆ ಬಗ್ಗೆ ದೂರು ನೀಡಿದ್ದಾರೆ. ಹಲ್ಲೆ ಮಾಡಿದ್ದಾರೆ ಎನ್ನಲಾದ ಶ್ರೀಕಾಂತ್ ಎಂಬುವರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಅವರ ಸ್ನೇಹಿತರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿದರು.

‘ಶನಿವಾರ ರಾತ್ರಿ ಹೋಟೆಲ್‌ ಕೆಲಸ ಮುಗಿಸಿ ದೇವೇಂದ್ರ ಅವರು ಮನೆಗೆ ಹೊರಟಿದ್ದರು. ಟಿ.ಸಿ.ಪಾಳ್ಯದಲ್ಲಿ ರಸ್ತೆ ಮಧ್ಯೆಯೇ ಕಾರು ನಿಲ್ಲಿಸಿಕೊಂಡಿದ್ದ ಯುವಕರು, ಮದ್ಯದ ಪಾರ್ಟಿ ಮಾಡುತ್ತಿದ್ದರು. ಜೋರಾಗಿ ಕೂಗಾಡುತ್ತಿದ್ದರು. ಅದನ್ನು ಪ್ರಶ್ನಿಸಿದ್ದ ದೇವೇಂದ್ರ, ಯುವಕರ ಬಳಿ ಹೋಗಿ ಬುದ್ದಿವಾದ ಹೇಳಿದ್ದರು. ಅಷ್ಟಕ್ಕೆ  ಕೋಪಗೊಂಡ ಯುವಕರು, ದೇವೇಂದ್ರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು.’

‘ಗಾಯಗೊಂಡಿದ್ದ ದೇವೇಂದ್ರ ಅವರನ್ನು ಸ್ಥಳೀಯರೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.