ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುತ್ತಿಗೆದಾರರ ಶೇ 25 ಬಿಲ್ ಬಾಕಿ | 10 ದಿನದಲ್ಲಿ ಪಾವತಿ: ಡಿ.ಕೆ. ಶಿವಕುಮಾರ್

Published : 10 ಆಗಸ್ಟ್ 2024, 23:30 IST
Last Updated : 10 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರಿಗೆ ಪಾವತಿಸಿರುವ ಬಿಲ್ ಮೊತ್ತದಲ್ಲಿ ಹಿಡಿದಿಟ್ಟುಕೊಂಡಿರುವ ಶೇ 25ರಷ್ಟು ಮೊತ್ತವನ್ನು 10 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.

ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್ ಅವರ ನೇತೃತ್ವದಲ್ಲಿ ಗುತ್ತಿಗೆದಾರರು ಶನಿವಾರ ರಾತ್ರಿ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಕೂಡಲೇ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದರು.

ಸಂಘದ ಪದಾಧಿಕಾರಿಗಳಾದ ಚೇತನ್ ಕುಮಾರ್, ಚಿಕ್ಕ ಹೊಂಬಯ್ಯ, ಕೆ.ಶ್ರೀನಿವಾಸ್, ವೆಂಕಟೇಶ್ ರೆಡ್ಡಿ, ವಿ.ಮಯೂರ, ವಿ.ಎಚ್.ರಂಗಸ್ವಾಮಿ, ಪ್ರಕಾಶ್, ಬಿ.ರಂಗನಾಥ್, ಕಾಂತರಾಜು, ಎನ್.ಜಿ.ವಿ.ಪಾಟೀಲ್ ಅವರು ಉಪಸ್ಥಿತರಿದ್ದರು.

'ಉಪಮುಖ್ಯಮತ್ರಿಯವರ ಭರವಸೆಯಂತೆ 10 ದಿನ ಕಾಯಲಾಗುತ್ತದೆ. ನಂತರ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು’ ಎಂದು ಸಂಘದ ಅಧ್ಯಕ್ಷ ನಂದಕುಮಾರ್ ಅವರುತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT