ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಆರ್‌ಡಿಒ ಪ್ರಾಂಗಣದಲ್ಲಿ ಸಿಲುಕಿದ್ದ ನವಿಲು ಸಂರಕ್ಷಣೆ

Last Updated 17 ಜೂನ್ 2021, 4:23 IST
ಅಕ್ಷರ ಗಾತ್ರ

ಬೆಂಗಳೂರು: ಸಿ.ವಿ.ರಾಮನ್‌ನಗರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಆವರಣದಲ್ಲಿ ಸಿಲುಕಿದ್ದ ಹೆಣ್ಣು ನವಿಲನ್ನು ವನ್ಯಜೀವಿ ಕಾರ್ಯಕರ್ತರು ಬುಧವಾರ ಸಂರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

‘ದಿಕ್ಕು ತಪ್ಪಿ ಬಂದ ಹೆಣ್ಣು ನವಿಲೊಂದು ಡಿಆರ್‌ಡಿಒ ಆವರಣವನ್ನು ಸೇರಿಕೊಂಡಿತ್ತು. ಜನರನ್ನು ಕಂಡು ಕಂಗಾಲಾಗಿದ್ದ ಅದು ಅಲ್ಲಿನ ಶೀಟ್‌ ಚಾವಣಿಯ ಮೇಲೇರಿತ್ತು. ಎರಡು ದಿನಗಳ ಹಿಂದೆ ನಾವು ಚಾವಣಿಯ ಶೀಟ್‌ಗಳನ್ನು ಸರಿಸಿ ಕೆಳಗಿಳಿಯಲು ಅನುವು ಮಾಡಿಕೊಟ್ಟೆವು. ನವಿಲು ಚಾವಣಿಯಿಂದ ಕೆಳಗೆ ಇಳಿದಿರುವುದಾಗಿ ಅಲ್ಲಿನ ಸಿಬ್ಬಂದಿ ಇಂದು ಬೆಳಿಗ್ಗೆ ಮಾಹಿತಿ ನೀಡಿದರು.ನಾಲ್ಕೈದು ದಿನಗಳಿಂದ ಅದಕ್ಕೆ ಆಹಾರವೂ ಸಿಕ್ಕಿರಲಿಲ್ಲ. ನಾನು ಸ್ಥಳಕ್ಕೆ ಹೋಗಿ ನೋಡಿದಾಗ ಅದು ಬಳಲಿದಂತೆ ಕಂಡು ಬಂತು. ಅದನ್ನು ಕೆಂಗೇರಿಯ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಒಪ್ಪಿಸಿದ್ದೇವೆ’ ಎಂದು ವನ್ಯಜೀವಿ ಕಾರ್ಯಕರ್ತ ಕೆ. ಮೋಹನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT