ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಾಯಾಚಿತ್ರ ಪ್ರದರ್ಶನ ಮೇ 18ಕ್ಕೆ

Published 11 ಮೇ 2023, 19:55 IST
Last Updated 11 ಮೇ 2023, 19:55 IST
ಅಕ್ಷರ ಗಾತ್ರ

ಬೆಂಗಳೂರು: ವನ್ಯಜೀವಿ ಛಾಯಾಗ್ರಾಹಕ ದೀಪಕ್‌ ಶಂಕರ್‌ ಅವರ ‘ಇನ್‌ಟು ದಿ ವೈಲ್ಡ್‌’ ಏಕವ್ಯಕ್ತಿ ಛಾಯಾಚಿತ್ರಗಳ ಪ್ರದರ್ಶನವು ಮೇ 18ರಿಂದ 21ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಲಾಗಿದೆ.

ದಕ್ಷಿಣ ಆಫ್ರಿಕಾ ಮತ್ತು ಭಾರತದ ಕಾಡುಗಳ ಪ್ರಾಕೃತಿಕ ಸೌಂದರ್ಯ ಮತ್ತು ವನ್ಯಜೀವಿಗಳಾದ ಹುಲಿ, ಆನೆ, ಸಿಂಹ ಮತ್ತು ಜಿರಾಫೆ ಸೇರಿ ವಿವಿಧ ಪ್ರಾಣಿಗಳ ಸೌಂದರ್ಯ ಮತ್ತು ಗಾಂಭೀರ್ಯವನ್ನು ದೀಪಕ್‌ ಶಂಕರ್‌ ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ಅವರಿಗೆ 1999ರಲ್ಲಿ ಪ್ರತಿಷ್ಠಿತ ‘ಡ್ಯೂಕ್ ಆಫ್ ಎಡಿನ್‌ಬರ್ಗ್’ ಪ್ರಶಸ್ತಿ ಲಭಿಸಿದೆ.

‘ಮೇ 18ರಂದು ಬೆಳಿಗ್ಗೆ 10ಕ್ಕೆ ಛಾಯಾಚಿತ್ರ ಪ್ರದರ್ಶನ ಪ್ರಾರಂಭವಾಗಲಿದ್ದು, ಸಂಜೆ 5ಗಂಟೆಗೆ ಕುಮಾರನ್‌ ಗ್ರೂಪ್‌ ಆಫ್‌ ಎಜುಕೇಷನಲ್‌ ಇನ್‌ಸ್ಟಿಟ್ಯೂಟ್‌ ಅಕಾಡೆಮಿಕ್ಸ್‌ ನಿರ್ದೇಶಕಿ ದೀಪಾ ಶ್ರೀಧರ್ ಉದ್ಘಾಟನೆ ಮಾಡಲಿದ್ದಾರೆ. ಈ ಪ್ರದರ್ಶನವು ಉಚಿತವಾಗಿದೆ’ ಎಂದು ದೀಪಕ್‌ ಶಂಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT