ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಸುರಕ್ಷತೆಗೆ ಬದಲು ಸಿಬ್ಬಂದಿಗಾಗಿ ಬಳಕೆ

ನಿರ್ಭಯ ಯೋಜನೆಯಡಿ ಖರೀದಿಸಿದ ‘ಪಿಂಕ್ ಸಾರಥಿ’ ವಾಹನ ದುರ್ಬಳಕೆ ಆರೋಪ
Last Updated 6 ಮಾರ್ಚ್ 2021, 20:49 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ಭಯ ಯೋಜನೆಯಡಿ ಮಹಿಳೆಯರ ಸುರಕ್ಷತೆಗೆ ನೆರವಾಗಲು ಬಿಎಂಟಿಸಿ ಖರೀದಿಸಿದ ಪಿಂಕ್ ಸಾರಥಿ ವಾಹನಗಳು ಚಾಲಕ ಮತ್ತು ನಿರ್ವಾಹಕರ ವಿರುದ್ಧ ಮೊಕದ್ದಮೆ ದಾಖಲಿಸಲು ಬಳಕೆಯಾಗುತ್ತಿವೆಯೇ?... ಹೌದು ಎನ್ನುತ್ತಿದೆ ಬಿಎಂಟಿಸಿ ಅಧಿಕಾರಿಗಳೇ ನೀಡಿರುವ ಮಾಹಿತಿ.

ಕೇಂದ್ರದ ನಿರ್ಭಯ ಯೋಜನೆಯಡಿ ಬಿಎಂಟಿಸಿಗೆ ದೊರೆತಿದ್ದ ₹56 ಕೋಟಿ ಅನುದಾನದಲ್ಲಿ ₹4.30 ಕೋಟಿಯಲ್ಲಿ 25 ಪಿಂಕ್ ಸಾರಥಿ ವಾಹನಗಳನ್ನು ಬಿಎಂಟಿಸಿ ಖರೀದಿ ಮಾಡಿತ್ತು. 2019ರ ಜೂನ್‌ನಲ್ಲಿ ಈ ವಾಹನಗಳ ಕಾರ್ಯಾಚರಣೆ ಆರಂಭಿಸಿದ್ದವು.

ಆರ್‌ಟಿಐ ಕಾರ್ಯಕರ್ತ ಎನ್‌.ಶ್ರೀನಿವಾಸ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಬಿಎಂಟಿಸಿ ಸಾರ್ವಜನಿಕ ಮಾಹಿತಿ ಅಧಿಕಾರಿ ಉತ್ತರ ನೀಡಿದ್ದಾರೆ. ಅದರ ಪ್ರಕಾರ, 2021ರ ಜನವರಿ ತನಕ ಈ ಸಾರಥಿ ವಾಹನಗಳ ಮೂಲಕ 189 ಪ್ರಕರಣಗಳಲ್ಲಿ ಮಹಿಳೆಯ ಸುರಕ್ಷತೆಗೆ ನೆರವಾಗಿದ್ದು, ಚಾಲಕ ಮತ್ತು ನಿರ್ವಾಹಕರ ನ್ಯೂನತೆಗಳಿಗೆ ಸಂಬಂಧಿಸಿದ 71,356 ಪ್ರಕರಣ ದಾಖಲಿಸಲಾಗಿದೆ.

‘ನಿರ್ಭಯಾ ಯೋಜನೆಯಡಿ ಮಹಿಳೆಯರ ಸುರಕ್ಷತೆಗೆ ನೆರವಾಗಲು ಖರೀದಿಸಿದ ವಾಹನಗಳನ್ನು ಬಿಎಂಟಿಸಿ ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಿರ್ಭಯ ಯೋಜನೆ ಅನುಷ್ಠಾನದಲ್ಲೂ ವಿಫಲರಾಗಿದ್ದಾರೆ. ಈ ವಾಹನಗಳನ್ನು ಬಳಸಿಕೊಂಡು ಚಾಲಕ ಮತ್ತು ನಿರ್ವಾಹಕರ ಮೇಲೆ ಶೋಷಣೆ ಮಾಡುತ್ತಿದ್ದಾರೆ’ ಎಂದು ಶ್ರೀನಿವಾಸ್ ಆರೋಪಿಸಿದರು.

ಟಿಕೆಟ್ ರಹಿತ ಪ್ರಯಾಣ: ನಿರ್ವಾಹಕರ ವಿರುದ್ಧ ಇಲ್ಲ ಕ್ರಮ

ಬಿಎಂಟಿಸಿ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಆಸನ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನ ಪ್ರಯಾಣಿಸುತ್ತಿದ್ದರೆ ಮಾತ್ರ ಅನ್ವಯ ಆಗುವಂತೆ ನಾನ್ ಇಷ‌್ಯೂಡ್ ನಾನ್ ಕಲೆಕ್ಟೆಡ್ (ಎನ್‌ಐಎನ್‌ಸಿ) ನಿಯಮ ಸಡಿಲಿಸಲಾಗಿದೆ. ಟಿಕೆಟ್ ರಹಿತ ಪ್ರಯಾಣಿಕರು ಕಂಡು ಬಂದರೆ ಅಥವಾ ಸೋರಿಕೆ ಮೊತ್ತ ₹15 ಕ್ಕಿಂತ ಕಡಿಮೆ ಇದ್ದರೆ ಅಪರಾಧ ಜ್ಞಾಪನಾ ಪತ್ರ ನೀಡದಿರಲು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಆದೇಶಿಸಿದ್ದಾರೆ.

‘ಈ ರೀತಿ ಪ್ರಕರಣದಲ್ಲಿ ವರ್ಷದಲ್ಲಿ ಮೂರು ಬಾರಿ ಸಿಕ್ಕಿಬಿದ್ದರೆ ಮಾತ್ರ ಶಿಸ್ತುಕ್ರಮ ಜರುಗಿಸಬಾರದು. ಟಿಕೆಟ್ ರಹಿತ ಪ್ರಯಾಣಿಕರಿಗೆ ‌ದಂಡ ವಿಧಿಸಬೇಕು’ ಎಂದು ತಿಳಿಸಿದ್ದಾರೆ. ಮುಷ್ಕರ ನಡೆಸಿದ್ದ ವೇಳೆ ಎನ್ಐಎನ್‌ಸಿ ನಿಯಮ ಸಡಿಲಿಕೆಯ ಬೇಡಿಕೆಯನ್ನೂ ನೌಕರರು ಇಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT