ಶನಿವಾರ, ಜನವರಿ 28, 2023
13 °C

‘112ಕ್ಕೆ ಕರೆ: 15 ನಿಮಿಷದಲ್ಲಿ ಸ್ಥಳಕ್ಕೆ ಪೊಲೀಸರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಗರದ ಜನರಿಗೆ ತುರ್ತು ಸಂದರ್ಭದಲ್ಲಿ ಸಹಾಯ ಮಾಡಲೆಂದು ಪೊಲೀಸ್ ಸಹಾಯವಾಣಿ–112 ಆರಂಭಿಸಲಾಗಿದ್ದು, ಈ ಸಂಖ್ಯೆಗೆ ಕರೆ ಮಾಡಿದರೆ 15 ನಿಮಿಷದೊಳಗೆ ಪೊಲೀಸರು ಸ್ಥಳದಲ್ಲಿ ಇರಲಿದ್ದಾರೆ’ ಎಂದು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ತಿಳಿಸಿದರು.

‘ಪೊಲೀಸ್ ಸಹಾಯವಾಣಿ– 112’ ಕುರಿತ ಜಾಗೃತಿ ವಾಹನ ಸಂಚಾರಕ್ಕೆ ಸೋಮವಾರ ಚಾಲನೆ ನೀಡಿದ ಪ್ರತಾಪ್ರೆಡ್ಡಿ, ‘ಅಕ್ಟೋಬರ್ 8ರವರೆಗೆ ನಗರದಲ್ಲಿ ವಾಹನ ಸಂಚರಿಸಲಿದೆ’ ಎಂದರು.

‘ನಗರದಲ್ಲಿ ಪೊಲೀಸರು ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ನಗರದ ಯಾವುದೇ ಭಾಗದಿಂದ ಕರೆ ಮಾಡಿದರೂ ಪೊಲೀಸರು ಸ್ಥಳಕ್ಕೆ ಹೋಗಲಿದ್ದಾರೆ. ಈ ವ್ಯವಸ್ಥೆ ನಿರ್ವಹಣೆ ಜವಾಬ್ದಾರಿಯನ್ನು ಕಮಾಂಡೊ ಕೇಂದ್ರಕ್ಕೆ ವಹಿಸಲಾಗಿದೆ’ ಎಂದು ಕಮಿಷನರ್ ಹೇಳಿದರು.

‘ಬಿಎಂಟಿಸಿ ನಿಲ್ದಾಣ, ತಂಗುದಾಣ, ಮಾರುಕಟ್ಟೆಗಳು, ಶಾಲಾ–ಕಾಲೇಜು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ 112 ಸಂಖ್ಯೆ ಜಾಗೃತಿ ಸ್ಟಿಕರ್‌ಗಳನ್ನು ಅಂಟಿಸಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.