ಶನಿವಾರ, ಜನವರಿ 23, 2021
28 °C

ನಂದಿನಿ ಲೇಔಟ್: ರೌಡಿ ಗುಂಡ ಕಾಲಿಗೆ ಪೊಲೀಸರ ಗುಂಡೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸುಲಿಗೆ, ಜೀವ‌ ಬೆದರಿಕೆ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರೌಡಿ ಕಾರ್ತಿಕ್ ಅಲಿಯಾಸ್ ಗುಂಡ (21) ಎಂಬಾತನನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಗುಂಡು ಹಾರಿಸಿ ಬುಧವಾರ ತಡರಾತ್ರಿ ಸೆರೆ ಹಿಡಿದಿದ್ದಾರೆ.


ನಿತ್ಯಾನಂದಾಚಾರಿ

'ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬರನ್ನು ಸುಲಿಗೆ‌ ಮಾಡಿದ್ದ ಗುಂಡ, ತಲೆಮರೆಸಿಕೊಂಡು ಓಡಾಡುತ್ತಿದ್ದ. ಪಿಎಸ್ಐ‌ ಎಚ್.ಎನ್. ನಿತ್ಯಾನಂದಾಚಾರಿ ಅವರು ರೌಡಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ' ಎಂದು ಪೊಲೀಸ್ ಮೂಲಗಳು ಹೇಳಿವೆ.

'ಗಾಯಗೊಂಡಿರುವ ರೌಡಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯದಲ್ಲಿ ಚೇತರಿಕೆ‌ ಕಂಡುಬಂದ ನಂತರ ಕಸ್ಟಡಿಗೆ ಪಡೆದು ವಿಚಾರಣೆ ‌ನಡೆಸಲಾಗುವುದು' ಎಂದೂ ಹೇಳಿವೆ. 

ಶ್ರೀರಾಮಪುರ ರೌಡಿ: '15ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಗುಂಡನ ಹೆಸರು, ಶ್ರೀರಾಮಮಪುರ ಠಾಣೆ ರೌಡಿ ಪಟ್ಟಿಯಲ್ಲಿದೆ' ಎಂದು ಮೂಲಗಳು ಹೇಳಿವೆ‌

'ತಲೆಮರೆಸಿಕೊಂಡಿದ್ದ ಆರೋಪಿ, ಓಕಳಿಪುರ ಬಳಿ ಬುಧವಾರ ರಾತ್ರಿ ಕಾಣಿಸಿಕೊಂಡಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಪೊಲೀಸರ ತಂಡ, ಸ್ಥಳಕ್ಕೆ ಹೋಗಿ ಆರೋಪಿಯನ್ನು ಹಿಡಿಯಲು ಮುಂದಾಗಿತ್ತು. ಕಾನ್‌ಸ್ಟೆಬಲ್ ಉಮೇಶ್ ಎಂಬುವರ ಮೇಲೆಯೇ ಹಲ್ಲೆ ಮಾಡಿದ್ದ ರೌಡಿ, ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಇದೇ ವೇಳೆಯೇ ಪಿಎಸ್‌ಐ ನಿತ್ಯಾನಂದಾಚಾರಿ, ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದರು. ಕುಸಿದು ಬಿದ್ದ ರೌಡಿಯನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದಾರೆ' ಎಂದೂ ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು