ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಧ್ವಜದ ಮೇಲೆ ರಾಜಕಾರಣ: ಬಿ.ಕೆ. ಚಂದ್ರಶೇಖರ್‌ ಟೀಕೆ

Last Updated 14 ಆಗಸ್ಟ್ 2022, 21:32 IST
ಅಕ್ಷರ ಗಾತ್ರ

ಬೆಂಗಳೂರು: ‘75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ‘ಆಜಾದಿ ಕಿ ಅಮೃತ ಮಹೋತ್ಸವ’ ಹೆಸರಿನಲ್ಲಿ ಮನೆಗಳು, ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಇತರ ಸ್ಥಳಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಬೇಕೆಂಬ ಕೇಂದ್ರ– ರಾಜ್ಯ ಸರ್ಕಾರಗಳ ಕ್ರಮ ಸ್ವಾಗತಾರ್ಹವಾದರೂ ಅನುಸರಿಸುತ್ತಿರುವ ಮಾರ್ಗಗಳು ಹಾಗೂ ಜನರನ್ನು ಪ್ರೇರೇಪಿಸುತ್ತಿರುವ ರೀತಿ ಆಕ್ಷೇಪಾರ್ಹವಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ಪ್ರೊ.ಬಿ.ಕೆ. ಚಂದ್ರಶೇಖರ್‌ ಅಭಿಪ್ರಾಯಪಟ್ಟಿದ್ದಾರೆ.

‘ರಾಷ್ಟ್ರೀಯ ಹಬ್ಬಗಳಂದು ಈ ಹಿಂದಿನಿಂದಲೂ ಸ್ವಯಂಪ್ರೇರಣೆಯಿಂದ ರಾಷ್ಟ್ರಧ್ವಜ ಹಾರಿಸುತ್ತಾ ಬರಲಾಗಿದೆ. ರಾಷ್ಟ್ರಧ್ವಜ ಹಾರಿಸುವ ವಿಷಯ, ದೇಶಭಕ್ತಿಯ ಹೆಸರಲ್ಲಿ ಈ ಹಿಂದೆಂದೂ ಅಧಿಕಾರ ರಾಜಕಾರಣದ ಸಾಧನವಾಗಿ ಬಳಕೆ ಆಗಿಲ್ಲ’ ಎಂದಿದ್ದಾರೆ.

‘ಬಸವನಗುಡಿಯಲ್ಲಿ ಗಾಂಧೀಜಿ ಯವರ ತತ್ವಕ್ಕೆ ವಿರುದ್ಧವಾಗಿ ಪಾಲಿಸ್ಟರ್ ಧ್ವಜಗಳನ್ನು ಸ್ಪರ್ಧಾತ್ಮಕ ಬೆಲೆಗೆ ಮಾರಾಟ ಮಾಡುತ್ತಿದ್ದದ್ದು ಅಸಹ್ಯ ಮೂಡಿಸಿತು. ಸರ್ಕಾರಿ ಇಲಾಖೆಗಳು, ನಗರಸಭೆ, ಕಾರ್ಪೊರೇಷನ್, ನಿಗಮ ಮಂಡಳಿಗಳಿಗೆ ರಾಷ್ಟ್ರಧ್ವಜಗಳ ಮಾರಾ ಟಕ್ಕೆ ಗುರಿ ನಿಗದಿಮಾಡಿರುವುದು ಸೇರಿ ಎಲ್ಲ ಘಟನೆಗಳು ರಾಷ್ಟ್ರಧ್ವಜದ ಬಗ್ಗೆಜನರಿಗಿದ್ದ ಭಾವನಾತ್ಮಕ ಗೌರವ, ಹೆಮ್ಮೆಗೆ ಧಕ್ಕೆ ತಂದಿವೆ’ ಎಂದಿದ್ದಾರೆ.

‘ಒಂದು ಸರ್ಕಾರ ಅಥವಾ ಪ್ರಭುತ್ವ ದಿಂದ ಜಾರಿಗೊಳಿಸಲ್ಪಟ್ಟ ‘ದೇಶಭಕ್ತಿ’, ತನ್ನದೇ ಆದ ಸ್ವಹಿತಾಸಕ್ತಿ ಸಾಧನೆಗೆ ರಾಜಕೀಯವಾಗಿ ಪಕ್ಷಪಾತದ ಸಾಧನ ವಾಗಲಿದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT