ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್‌ಎಂವಿ ಬಡಾವಣೆ ವ್ಯಾಪ್ತಿಯಲ್ಲಿ ಇಂದು ವಿದ್ಯುತ್ ವ್ಯತ್ಯಯ

Published : 14 ಸೆಪ್ಟೆಂಬರ್ 2024, 1:17 IST
Last Updated : 14 ಸೆಪ್ಟೆಂಬರ್ 2024, 1:17 IST
ಫಾಲೋ ಮಾಡಿ
Comments

ಬೆಂಗಳೂರು: ನಗರದ ಆರ್‌ಎಂವಿ ಬಡಾವಣೆಯ ವಿದ್ಯುತ್ ಉಪ ಕೇಂದ್ರದಲ್ಲಿ ಅರ್ಧ ವಾರ್ಷಿಕ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಕಾರಣದಿಂದ ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಉಪ ಕೇಂದ್ರದ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ರಾಮಯ್ಯ ಆಸ್ಪತ್ರೆ, ಪೈಪ್‌ ಲೈನ್‌ ರಸ್ತೆ, ಎ.ಜಿ.ಎಸ್.‌ ಲೇಔಟ್‌, ಸದಾಶಿವ ನಗರ ಪೋಲಿಸ್‌ ಠಾಣೆ, ಎಲ್.ಜಿ.ಹಳ್ಳಿ, ಆರ್.ಎಂ.ವಿ ಎರಡನೇ ಹಂತ, ಬಿ.ಇ.ಎಲ್‌ ರಸ್ತೆ, ಎಂ.ಎಸ್.ಆರ್‌ ನಗರ, ಜಲದರ್ಶಿನಿ ಲೇಔಟ್‌, ರಾಮಯ್ಯ ಬಾಯ್ಸ್‌ ಹಾಸ್ಟೆಲ್‌, ಎ.ಕೆ.ಕಾಲೊನಿ, ಕಾಫಿ ಡೇ, ಪಿಜ್ಜಾ ಹಟ್‌, ಸೀನಪ್ಪ ಲೇಔಟ್‌, ಇಸ್ರೊ, ಡಾಲರ್ಸ್‌ ಕಾಲೊನಿ, ಚಿಕ್ಕಮಾರನಹಳ್ಳಿ, ಗೌರಿ ಅಪಾರ್ಟ್‌ಮೆಂಟ್‌, ಎನ್.ಎಸ್.ಹಳ್ಳಿ, ಯಜಮಾನಪ್ಪ ಲೇಔಟ್‌, ಯು.ಎ.ಎಸ್ ಲೇಔಟ್, ಎನ್‌ಟಿಐ ಲೇಔಟ್, ವಿನಾಯಕ ಲೇಔಟ್, ಟೀಚರ್ಸ್ ಕಾಲೊನಿ, ವಿಎಸ್‌ಎನ್‌ಎಲ್, ಪೋಸ್ಟಲ್ ಲೇಔಟ್, ಜಡ್ಜಸ್ ಲೇಔಟ್, ಎನ್‌ಜಿಇಎಫ್ ಲೇಔಟ್, ಅಮರಜ್ಯೋತಿ ಲೇಔಟ್, ಹನುಮಯ್ಯ ಲೇಔಟ್, ಕೊಲ್ಟೆಪಾಟೀಲ್ ದೊಡ್ಮನೆ, ಬಸವಲ್ಲಾಸ್ ಮುಖ್ಯರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT