ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ಶಾಖದಿಂದ ವಿದ್ಯುತ್‌ ಉತ್ಪಾದನೆ

Last Updated 9 ಮಾರ್ಚ್ 2021, 21:47 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಜವಾಹರಲಾಲ್‌ ನೆಹರೂ ಸೆಂಟರ್‌ ಫಾರ್‌ ಅಡ್ವಾನ್ಸ್ಡ್‌ ಸೈಂಟಿಫಿಕ್‌ ರೀಸರ್ಚ್‌ನ (ಜೆಎನ್‌ಸಿಎಎಸ್‌ಆರ್‌) ಪ್ರಾಧ್ಯಾಪಕ ಕಾನಿಷ್ಕ ವಿಶ್ವಾಸ್‌ ನೇತೃತ್ವದ ಸಂಶೋಧಕರ ತಂಡವು ತ್ಯಾಜ್ಯ ಶಾಖವನ್ನು ವಿದ್ಯುತ್‌ ಶಕ್ತಿಯನ್ನಾಗಿ ಪರಿವರ್ತಿಸಬಲ್ಲ ಪರಿಸರ ಸ್ನೇಹಿ ‘ಥರ್ಮೋ ಎಲೆಕ್ಟ್ರಿಕ್‌’ ತಂತ್ರಾಂಶ ಅಭಿವೃದ್ಧಿಪಡಿಸಿದೆ.

ವಿಶ್ವದ ಪ್ರತಿಷ್ಠಿತ ಜರ್ನಲ್‌ಗಳಲ್ಲಿ (ವಿಜ್ಞಾನಕ್ಕೆ ಸಂಬಂಧಿಸಿ) ಒಂದಾದ ‘ಸೈನ್ಸ್‌’ನಲ್ಲಿ ಈ ಸಂಶೋಧನೆಯ ಕುರಿತ ವರದಿ ಪ್ರಕಟವಾಗಿದೆ.

ಲ್ಯಾಪ್‌ಟಾಪ್‌ನಿಂದ ಉತ್ಪತ್ತಿಯಾಗುವ ಶಾಖವನ್ನು ಮೊಬೈಲ್‌ ಪೋನ್‌ ಚಾರ್ಜ್‌ ಮಾಡಲು, ಮೊಬೈಲ್‌ನಿಂದ ಉತ್ಪತ್ತಿಯಾಗುವ ಶಾಖವನ್ನು ಕೈಗಡಿಯಾರ ರೀಚಾರ್ಜ್‌ ಮಾಡಲು ಬಳಸಬಹುದು.

‘ನಾವು ಅಭಿವೃದ್ಧಿಪಡಿಸಿರುವ ತಂತ್ರಾಂಶದ ಬಗ್ಗೆ ರತನ್‌ ಟಾಟಾ ಒಡೆತನದ ಟಾಟಾ ಸ್ಟೀಲ್ಸ್‌ ಸಂಸ್ಥೆ ಆಸಕ್ತಿ ತೋರಿದೆ. ಉಕ್ಕಿನ ಘಟಕಗಳಲ್ಲಿ ಉತ್ಪತ್ತಿಯಾಗುವ ಅಪಾರ ಪ್ರಮಾಣದ ತ್ಯಾಜ್ಯ ಶಾಖವನ್ನು ವಿದ್ಯುತ್‌ ಶಕ್ತಿಯನ್ನಾಗಿ ಪರಿವರ್ತಿಸುವ ಸಲುವಾಗಿ ಈ ತಂತ್ರಾಂಶವನ್ನು ತನ್ನ ಘಟಕಗಳಲ್ಲಿ ಅಳವಡಿಸಿಕೊಳ್ಳಲು ಯೋಜನೆ ರೂಪಿಸಿದೆ’ ಎಂದು ವಿಶ್ವಾಸ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಭಾರತೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಸಂಶೋಧನಾ ಮಂಡಳಿ (ಎಸ್‌ಇಆರ್‌ಬಿ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ), ರಸಾಯನವಿಜ್ಞಾನ ಘಟಕ (ಎನ್‌ಸಿಯು), ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಮೆಟೀರಿಯಲ್ಸ್‌ ಸೈನ್ಸ್‌ (ಐಸಿಎಂಎಸ್‌) ಹಾಗೂ ಜೆಎನ್‌ಸಿಎಎಸ್‌ಆರ್‌ ಸಂಸ್ಥೆಗಳು ಈ ಸಂಶೋಧನೆಗೆ ಆರ್ಥಿಕ ನೆರವು ನೀಡಿವೆ’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT