ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕರ ಜೀವನಗಾಥೆ ಹೇಳುವ ‘ಪ್ರೇರಣಾ’

Last Updated 19 ಆಗಸ್ಟ್ 2020, 21:37 IST
ಅಕ್ಷರ ಗಾತ್ರ

ಬೆಂಗಳೂರು: ಸಂಗೀತ ನೃತ್ಯಭಾರತಿ ಅಕಾಡೆಮಿ ತನ್ನ ಇನ್‌ಸ್ಟಾಗ್ರಾಂ ಪುಟದಲ್ಲಿ ಸಾಧಕರ ಜೀವನ ಪಯಣ ಅರಿಯುವ ‘ಪ್ರೇರಣಾ’ ಎಂಬ ಕಾರ್ಯಕ್ರಮ ಆಯೋಜಿಸಿದೆ. ಆ.23ರಿಂದ ಸಂಜೆ 5.30ರಿಂದ 8ರವರೆಗೆ ನಿತ್ಯ ಇಬ್ಬರು ಸಾಧಕರ ಸಂದರ್ಶನವನ್ನು ಸಂಸ್ಥೆ ಮಾಡಲಿದೆ.

‘ನಾಡು ಅಥವಾ ದೇಶ ಕಂಡ ಸಾಧಕರ, ಗಣ್ಯರ ಸಂದರ್ಶನ ಮಾಡ ಲಾಗುವುದು. ತಮ್ಮ ಜೀವನ ಮತ್ತು ವೃತ್ತಿಯ ಸೋಜಿಗದ ಪಯಣವನ್ನು ಹೇಳಲು ಗಣ್ಯವ್ಯಕ್ತಿಗಳಿಗೆ ಒಂದು ವೇದಿಕೆ ನಿರ್ಮಾಣವಾದರೆ, ಅವರ ಯಶೋ ಗಾಥೆಯನ್ನು ಕೇಳಿ ಪ್ರೇರಣೆಗೊಳ್ಳಲು ಸಾರ್ವಜನಿಕರಿಗೊಂದು ಅವಕಾಶ ಕಲ್ಪಿಸುವುದೇ ಈ ಕಾರ್ಯಕ್ರಮದ ಉದ್ದೇಶ’ ಎಂದು ಅಕಾಡೆಮಿಯ ರೂವಾರಿ ಪದ್ಮಾ ಹೇಮಂತ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆನೂರು ಅನಂತಕೃಷ್ಣ ಶರ್ಮ, ಎಚ್.ಎಸ್.ವೇಣುಗೋಪಾಲ್, ಪ್ರಸನ್ನಕುಮಾರ್, ಸೋಮಶೇಖರ ಜೋಯಿಸ್, ವಿ. ಮನೋಹರ್,ರಮೇಶ್ ಚಂದ್ರ, ಅರ್ಚನಾ ಉಡುಪ, ಮಾನಸ ಹೊಳ್ಳ, ರೆಮೋ ರೇಖಾ, ಕಿರಣ್ ಮತ್ತು ಸಂಧ್ಯಾ ದಂಪತಿ, ಪೂರ್ಣಿಮಾ ಗುರುರಾಜ, ಕೆ. ಬೃಂದಾ, ಸೀತಾ ಗುರು ಪ್ರಸಾದ್, ಮಂಟಪ ಪ್ರಭಾಕರ ಉಪಾಧ್ಯ, ಸೌಂದರ್ಯಾ ಶ್ರೀವತ್ಸ, ನವ್ಯಾ ನಟರಾಜನ್, ಎಂ.ಎ. ಸುಬ್ಬರಾವ್, ಸುಗ್ಗನಹಳ್ಳಿ ಷಡಕ್ಷರಿ, ರೂಪಶ್ರೀ ಮಧುಸೂದನ್, ಹರೀಶ್ ನಾಗರಾಜು, ಪಿ.ಎಚ್. ವಿಶ್ವನಾಥ್ , ಕೆ.ವಿ. ಶ್ರೀನಿವಾಸ್ ಅವರ ಸಂದರ್ಶನ ಮಾಡಲಾಗುವುದು ಎಂದು ಹೇಳಿದ್ದಾರೆ.https://instagram.com/sangeethnrityabharathi?igshid=dkx3fvr9yofc ಈ ಲಿಂಕ್‌ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT