ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಕಾರಾತ್ಮಕವಾಗಿ ಯೋಚಿಸಿ, ಹೊಸತನದ ಬಗ್ಗೆ ಆಲೋಚಿಸಿ: ನಟಿ ಅದಿತಿ ರಾವ್ ಹೈದರಿ

‘ಸಾಧಕರ ಸಂವಾದ‘ದಲ್ಲಿ ಬಹುಭಾಷಾ ನಟಿ ಅದಿತಿ ರಾವ್ ಹೈದರಿ
Published 4 ಆಗಸ್ಟ್ 2024, 16:39 IST
Last Updated 4 ಆಗಸ್ಟ್ 2024, 16:39 IST
ಅಕ್ಷರ ಗಾತ್ರ

ಯಲಹಂಕ: ಬ್ರಿಟಿಷ್‌ ಕೌನ್ಸಿಲ್‌ ಮತ್ತು ನ್ಯಾಷನಲ್‌ ಇಂಡಿಯನ್‌ ಸ್ಟೂಡೆಂಟ್ಸ್‌ ಹಾಗೂ ಅಲುಮ್ನಿ ಯೂನಿಯನ್‌ ಯಕೆ ಸಹಯೋಗದಲ್ಲಿ ರಾಜಾನುಕುಂಟೆ ಸಮೀಪದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಸಾಧಕರ ಸಂವಾದ-2024 ಬೆಂಗಳೂರು ಆವೃತ್ತಿ‘ ಕಾರ್ಯಕ್ರಮವನ್ನು ಬಹುಭಾಷಾ ನಟಿ ಅದಿತಿ ರಾವ್‌ ಹೈದರಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ನಾವು ಸದಾ ಸಕಾರಾತ್ಮಕವಾಗಿ ಯೋಚಿಸಬೇಕು. ಮನಸ್ಸು ಯಾವಾಗಲೂ ಹೊಸತನದ ಬಗ್ಗೆ ಆಲೋಚಿಸಬೇಕು. ಪ್ರತಿ ನಿಮಿಷ ಜೀವನದಲ್ಲಿ ಖುಷಿಯನ್ನು ಅನುಭವಿಸಬೇಕು. ಮನಸಿನ ಮಾತಿಗೆ ಓಗೊಟ್ಟು, ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ಪ್ರಯತ್ನವನ್ನು ಎಂದಿಗೂ ನಿಲ್ಲಿಸಬೇಡಿ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ಕುಲಪತಿ ಡಾ.ಅನುಭಾ ಸಿಂಗ್‌ ಮಾತನಾಡಿ, ‘ಬೇರೆ ಬೇರೆ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ನಮ್ಮ ವಿ.ವಿಗೆ ಆಗಮಿಸಿ, ಉನ್ನತ ಶಿಕ್ಷಣದಲ್ಲಿ ಲಭ್ಯವಿರುವ ಅವಕಾಶಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಇದರಿಂದ‌ ನಮ್ಮ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ನಿಸಾರ್‌ ಅಹಮದ್‌, ಉಪಾಧ್ಯಕ್ಷ ಸಲ್ಮಾನ್‌ ಅಹಮದ್‌, ಸಹ ಕುಲಪತಿ ಡಾ.ಎಂ.ಧನಂಜಯ ಮತ್ತಿತರರು ಉಪಸ್ಥಿತರಿದ್ದರು.

ಕಿಂಗ್ಸ್‌ ಕಾಲೇಜ್‌ ಆಫ್‌ ಲಂಡನ್‌, ಇಂಪೀರಿಯಲ್‌ ಕಾಲೇಜ್‌ ಆಫ್‌ ಲಂಡನ್‌ ಹಾಗೂ ಡರ್ಹಾಮ್‌ ವಿಶ್ವವಿದ್ಯಾಲಯ ಸೇರಿದಂತೆ 30ಕ್ಕೂ ಹೆಚ್ಚು ಜಾಗತಿಕ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಜೊತೆಗೆ, ಬೆಂಗಳೂರಿನ ಪ್ರಮುಖ ಕಾಲೇಜುಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT