ಶುಕ್ರವಾರ, ಜೂನ್ 25, 2021
21 °C

ಪತ್ರಕರ್ತರ ಕುಟುಂಬಕ್ಕೂ ಲಸಿಕೆ ನೀಡಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪತ್ರಕರ್ತರನ್ನು ಕೋವಿಡ್ ಯೋಧರೆಂದು ಪರಿಗಣಿಸಿರುವ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿರುವ ಬೆಂಗಳೂರು ಪ್ರೆಸ್ ಕ್ಲಬ್, ಅವರ ಕುಟುಂಬ ಸದಸ್ಯರಿಗೂ ಅದ್ಯತೆ ಮೇರೆಗೆ ಲಸಿಕೆ ನೀಡಬೇಕು ಎಂದು ಮನವಿ ಮಾಡಿದೆ.

‍‍ಪ್ರೆಸ್‌ ಕ್ಲಬ್‌ನಲ್ಲಿ ಎರಡು ಬಾರಿ ಲಸಿಕೆ ಅಭಿಯಾನ ಆಯೋಜಿಸಲಾಗಿತ್ತು. 45 ವರ್ಷ ಮೇಲ್ಪಟ್ಟ 283 ಪತ್ರಕರ್ತರಿಗೆ ಕಳೆದ ತಿಂಗಳು ಲಸಿಕೆ ನೀಡಲಾಗಿದ್ದು, ಎರಡನೇ ಬಾರಿಗೆ 18 ವರ್ಷ ಮೇಲ್ಪಟ್ಟ 612 ಪತ್ರಕರ್ತರಿಗೆ ಲಸಿಕೆ ನೀಡಲಾಗಿದೆ ಎಂದು ಪ್ರೆಸ್ ಕ್ಲಬ್ ತಿಳಿಸಿದೆ. 

‘ಪತ್ರಕರ್ತರ ಕುಟುಂಬ ಸದಸ್ಯರೂ ಸೋಂಕಿನ ಅಪಾಯದಲ್ಲಿದ್ದು, ಹೆಂಡತಿ ಮತ್ತು ಮಕ್ಕಳಿಗೂ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು. ಪತ್ರಕರ್ತರಿಗೆ ನಗರದ ಆಸ್ಪತ್ರೆಗಳಲ್ಲಿ ಆಮ್ಲಜನಕ ಹಾಸಿಗೆ ಮತ್ತು ಐಸಿಯು ಹಾಸಿಗೆಗಳನ್ನು ಮೀಸಲಿಡಬೇಕು’ ಎಂದು ಪ್ರೆಸ್ ಕ್ಲಬ್ ಅಧ್ಯಕ್ಷ ಕೆ. ಸದಾಶಿವ ಶಣೈ, ಪ್ರಧಾನ ಕಾರ್ಯದರ್ಶಿ ಎಚ್.ವಿ. ಕಿರಣ್ ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು