ಬುಧವಾರ, ಮೇ 25, 2022
22 °C

ಸೈಕ್ಲಿಂಗ್ ಜಾಗೃತಿ ರ‍್ಯಾಲಿ 14ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರೋಟರಿ ಬೆಂಗಳೂರು ಐಟಿ ಕಾರಿಡಾರ್ (ಆರ್‌ಬಿಐಟಿಸಿ) ಸಂಸ್ಥೆಯು ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್‌), ಪಾಲಿಕೆ ಹಾಗೂ ನಗರ ಸಂಚಾರ ಪೊಲೀಸರ ಸಹಯೋಗದಲ್ಲಿ ಸೈಕಲ್ ಬಳಕೆಗೆ ಉತ್ತೇಜನ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ನ.14ರಂದು ‘ಸೈಕಲ್ ಬೆಂಗಳೂರು ಸೈಕಲ್‌’ ಘೋಷಣೆಯಡಿ ಸೈಕಲ್ ರ‍್ಯಾಲಿ ಹಮ್ಮಿಕೊಂಡಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಬಿಐಟಿಸಿ ಅಧ್ಯಕ್ಷ ಪವನ್ ಸೇಠ್, ‘ಸೈಕಲ್ ರ‍್ಯಾಲಿ ನ.14ರ ಬೆಳಿಗ್ಗೆ 7 ಗಂಟೆಗೆ ಸಿಲ್ಕ್ ಬೋರ್ಡ್ ಜಂಕ್ಷನ್‌ನ ಹೊರವರ್ತುಲ ರಸ್ತೆಯಿಂದ ಆರಂಭಗೊಂಡು ಕೆ.ಆರ್.ಪುರದ ಲೌರಿ ಅಡ್ವೆಂಟಿಸ್ಟ್ ಕಾಲೇಜಿನವರೆಗೆ 16 ಕಿ.ಮೀವರೆಗೆ ಕ್ರಮಿಸಲಿದೆ. 700ಕ್ಕೂ ಹೆಚ್ಚು ಮಂದಿ ಸೈಕಲ್‌ ತುಳಿಯಲಿದ್ದಾರೆ’ ಎಂದರು.

‘ಬೆಂಗಳೂರು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್.ರವಿಕಾಂತೇಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಆರ್‌ಬಿಐಟಿಸಿನಿಂದ ನೆರವು ಪಡೆಯುತ್ತಿರುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿನಿಯರಿಗೆ ‘ಯುಲು’ ಸಂಸ್ಥೆಯು 50 ಬೈಸಿಕಲ್‍ಗಳನ್ನು ದೇಣಿಗೆಯಾಗಿ ನೀಡಲಿದೆ. ‘ಸೈಕಲ್ ಬೆಂಗಳೂರು ಸೈಕಲ್’ನಲ್ಲಿ ಭಾಗವಹಿಸಲು https://rbitc.org/ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು’ ಎಂದು ಹೇಳಿದರು.

ಸಂಪರ್ಕ:9663455366

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು