ಬೆಂಗಳೂರು: ರಾಜ್ಯದಲ್ಲಿನ ಅನುದಾನಿತ ಸಂಯುಕ್ತ ಪದವಿ ಕಾಲೇಜುಗಳಿಂದ, ಪದವಿ ಪೂರ್ವ ಕಾಲೇಜುಗಳು ವಿಭಜನೆಯಾಗಿ 25 ವರ್ಷಗಳಾಗಿವೆ. ಆದರೆ, ಇದುವರೆಗೂ ವಿಷಯವಾರು ಹುದ್ದೆಗಳು ಸೃಷ್ಟಿಯಾಗಿಲ್ಲ ಹಾಗೂ ಖಾಲಿ ಇರುವ ಹುದ್ದೆಗಳನ್ನೂ ತುಂಬಿಲ್ಲ. ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿರ್ದೇಶನದಂತೆ 2001ರಲ್ಲಿ ರಾಜ್ಯದಲ್ಲಿನ 164 ಅನುದಾನಿತ ಪದವಿ ಕಾಲೇಜುಗಳಿಂದ, ಪದವಿ ಪೂರ್ವ ಕಾಲೇಜುಗಳನ್ನು ಪ್ರತ್ಯೇಕಗೊಳಿಸಲಾಯಿತು. ಯುಜಿಸಿ ವೇತನ ಸೇರಿದಂತೆ ವಿವಿಧ ಸೌಲಭ್ಯಗಳು ಸಿಗಲಿವೆ ಎಂಬ ಕಾರಣಕ್ಕೆ ಆಗ ಬಹುತೇಕ ಉಪನ್ಯಾಸಕರು ಪದವಿ ಕಾಲೇಜುಗಳಲ್ಲೇ ಉಳಿದುಕೊಂಡರು. ಇದಾದ ಬಳಿಕ ವಿಭಜಿತ ಪಿಯು ಕಾಲೇಜುಗಳಲ್ಲಿ ಹುದ್ದೆಗಳ ಸೃಷ್ಟಿ, ನೇಮಕಾತಿ ಆಗಿಲ್ಲ ಎಂದು ಉಪನ್ಯಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಯುಜಿಸಿ ವೇತನ ಶ್ರೇಣಿಯನ್ನು ಎಲ್ಲರಿಗೂ ನೀಡಲು ಸಾಧ್ಯವಿಲ್ಲ. ಪದವಿ ಕಾಲೇಜುಗಳಿಂದ ಪದವಿ ಪೂರ್ವ ಕಾಲೇಜುಗಳನ್ನು ಪ್ರತ್ಯೇಕಗೊಳಿಸಬೇಕು. ಆ ರೀತಿ ಮಾಡಿದರೆ ಮಾತ್ರ ಅನುದಾನ, ಯುಜಿಸಿ ವೇತನ ಶ್ರೇಣಿ ಸಿಗಲಿದೆ ಎಂದು ಅನುದಾನ ಆಯೋಗ ಷರತ್ತು ವಿಧಿಸಿದ ಕಾರಣ ಪಿಯು ವಿಭಾಗವನ್ನು ಅನುದಾನಿತ ಸಂಯುಕ್ತ ಪದವಿ ಕಾಲೇಜುಗಳಿಂದ ವಿಭಜಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ವ್ಯಾಪ್ತಿಗೆ ತರಲಾಗಿದೆ.

ಈ ರೀತಿ ಪ್ರತ್ಯೇಕವಾದಾಗ, ಬಹುತೇಕ ಉಪನ್ಯಾಸಕರು ಪದವಿ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡರು. ಬೆರಳೆಣಿಕೆಯಷ್ಟು ಪದವಿ ಕಾಲೇಜುಗಳಲ್ಲಿ ಕಾರ್ಯಭಾರ ಇರಲಿಲ್ಲ. ಅಂತಹ ಕಡೆ ಕೆಲವರು ಅನಿವಾರ್ಯವಾಗಿ ವಿಭಜಿತ ಪದವಿ ಪೂರ್ವ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡರು. ಅಂಥಹವರಲ್ಲಿ ಬಹುತೇಕ ಮಂದಿ ಈಗ ನಿವೃತ್ತರಾಗಿದ್ದಾರೆ. ಆ ಹುದ್ದೆಗಳನ್ನೂ ಸರ್ಕಾರ ತುಂಬುತ್ತಿಲ್ಲ. ಇದರಿಂದಾಗಿ ಬೋಧನೆಗೆ ತೊಂದರೆಯಾಗುತ್ತಿದೆ ಎಂದು ಉಪನ್ಯಾಸಕರೊಬ್ಬರು ಅಳಲು ತೋಡಿಕೊಂಡರು.

‘ವಿಭಜನೆಯಾದ ಪಿಯು ಕಾಲೇಜುಗಳಲ್ಲಿ ವಿಷಯವಾರು ಹುದ್ದೆಗಳನ್ನು ಸೃಷ್ಟಿಸಿ, ಅವುಗಳ ಭರ್ತಿಗೆ ಸರ್ಕಾರ ಅನುಮತಿ ನೀಡಬೇಕಾಗಿತ್ತು. ಅಲ್ಲದೆ ನಿವೃತ್ತಿಯಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿತ್ತು. ಆದರೆ, ಇಷ್ಟು ವರ್ಷವಾದರೂ ಇತ್ತ ಗಮನಹರಿಸಿಲ್ಲ. ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಿಯು ಕಾಲೇಜಿಗೆ ಇನ್ನೂ ಹುದ್ದೆಗಳು ಸೃಷ್ಟಿಯಾಗಿಲ್ಲ. ವಿಭಜಿತ ಪಿಯು ಕಾಲೇಜುಗಳಲ್ಲಿ ಈಗ ಇರುವ ಸಿಬ್ಬಂದಿ ಸಂಯುಕ್ತ ಪದವಿ ಕಾಲೇಜುಗಳಿಂದ ಬಂದವರು. ಹೀಗಾಗಿ ಅವರ ನಿವೃತ್ತಿಯಿಂದ ತೆರವಾದ ಹುದ್ದೆಗಳನ್ನು ತುಂಬಲು ತಾಂತ್ರಿಕ ತೊಂದರೆಗಳು ಇವೆ. ಈ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಬಗೆಹರಿಸಿಕೊಳ್ಳಬೇಕು ಎನ್ನುತ್ತಾರೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು.

ಹೆಸರಿಗಷ್ಟೇ ಅನುದಾನಿತ ಕಾಲೇಜು:

ಸಂಯುಕ್ತ ಪದವಿ ಕಾಲೇಜಿನಿಂದ ಪಿಯು ಕಾಲೇಜುಗಳು ಪ್ರತ್ಯೇಕವಾದಾಗ ಸರ್ಕಾರದಿಂದ ಅನುಮೋದನೆಯಾದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ–ಬೋಧಕೇತರ ಸಿಬ್ಬಂದಿಯನ್ನು ಹೊರತುಪಡಿಸಿ, ಖಾಲಿ ಇರುವ ಹುದ್ದೆಗಳನ್ನು ಅನುದಾನ ರಹಿತ ಎಂದು ಘೋಷಿಸಲಾಗಿದೆ. ಬಹುತೇಕ ಕಾಲೇಜುಗಳಲ್ಲಿ ಇಬ್ಬರು ಅಥವಾ ಮೂವರು ಕಾಯಂ ಉಪನ್ಯಾಸಕರು ಇದ್ದಾರೆ. ಇವರನ್ನು ಇಟ್ಟುಕೊಂಡು ಅನುದಾನಿತ ಕಾಲೇಜು ಎಂದು ಹೇಳುವ ಬದಲು ಮುಚ್ಚುವುದೇ ಒಳ್ಳೆಯದು ಎಂದು ಉಪನ್ಯಾಸಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ವಿಭಜನೆ ಬಳಿಕ ಉಂಟಾಗುವ ಕಾರ್ಯಭಾರ, ಜ್ಯೇಷ್ಠತೆ ಇತ್ಯಾದಿ ಸಮಸ್ಯೆಗಳ ನಿವಾರಣೆ ಸಂಬಂಧ ಪ್ರಾಂಶುಪಾಲರ ಸಭೆ ಕರೆದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶನಾಲಯದಿಂದ ಸೂಚನೆಗಳನ್ನು ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಆದರೆ, ಇದುವರೆಗೂ ಆ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಆಗಿಲ್ಲ ಎನ್ನುತ್ತಾರೆ ಉಪನ್ಯಾಸಕರು.

ಸಂಯುಕ್ತ ಪದವಿ ಕಾಲೇಜಿನಲ್ಲಿ ಇದ್ದ ಬೋಧಕರನ್ನು ಸೇವಾ ಹಿರಿತನದ ಮೇಲೆ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರ ಹುದ್ದೆಗೆ ಪ್ರಭಾರಿಯಾಗಿ ನೇಮಿಸಲಾಗಿತ್ತು. ಅವರ ನಿವೃತ್ತಿ ಬಳಿಕ ಮತ್ತೊಬ್ಬ ಪ್ರಭಾರಿ ಬರುತ್ತಾರೆ. ಕಾಯಂ ಆಗಿ ಪ್ರಾಂಶುಪಾಲರು ಇಲ್ಲ. ವಿಭಜಿತ ಪಿಯು ಕಾಲೇಜುಗಳು ನಾಮಕಾವಸ್ತೆಗೆ ಇವೆ. ಇವುಗಳ ಗೋಳು ಕೇಳುವವರೇ ಇಲ್ಲ ಎಂದು ಪ್ರಭಾರಿ ಪ್ರಾಂಶುಪಾಲರೊಬ್ಬರು ಬೇಸರ ವ್ಯಕ್ತಪಡಿಸಿದರು.

ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಕಾಲೇಜುಗಳು

ಯುಜಿಸಿ ನಿರ್ದೇಶನದಂತೆ ವಿಭಜನೆ

ಅನಾಥವಾಗಿರುವ ಪ್ರತ್ಯೇಕ ಪಿಯು ಕಾಲೇಜುಗಳು

ಒಮ್ಮೆ ಅನುದಾನಕ್ಕೆ ಒಳಪಡಿಸಿ’

ಸದ್ಯ ಅಸ್ತಿತ್ವದಲ್ಲಿ ಇರುವ 156 ಅನುದಾನಿತ ಪ್ರತ್ಯೇಕ ಪಿಯು ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿರುವ ಉಪನ್ಯಾಸಕರ ಪೈಕಿ ಹಲವರು ನಿವೃತ್ತಿಯ ಅಂಚಿನಲ್ಲಿದ್ದಾರೆ. ವಿಷಯವಾರು ಹುದ್ದೆಗಳನ್ನು ಸೃಷ್ಟಿಸಿ ವೇತನ ಅನುದಾನಕ್ಕೆ ಒಳಪಡಿಸುವ ಮೂಲಕ ನ್ಯಾಯ ದೊರಕಿಸಿಕೊಡಬೇಕು ಎಂಬುದು ಉಪನ್ಯಾಸಕರ ಬೇಡಿಕೆ.

ಅನುದಾನಕ್ಕೆ ಒಳಪಡಬಹುದು ಎಂಬ ಭರವಸೆಯಿಂದ 15–20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಈ ಹಂತದಲ್ಲಿ ಬೇರೆ ಕಡೆ ಹೋಗುವಂತೆಯೂ ಇಲ್ಲ. ಈಗ ಇರುವ ಸಿಬ್ಬಂದಿಯನ್ನಾದರೂ ಕಾಯಂ ಮಾಡಿದರೆ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದು ಉಪನ್ಯಾಸಕರೊಬ್ಬರು ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.