ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು: ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠ

ವೇಳಾಪಟ್ಟಿಯಂತೆ ನಡೆಯುತ್ತಿದೆ ಬೋಧನೆ * ವಿದ್ಯಾರ್ಥಿಗಳು ಸಂತಸ
Last Updated 13 ಆಗಸ್ಟ್ 2020, 23:12 IST
ಅಕ್ಷರ ಗಾತ್ರ

ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಯೂಟ್ಯೂಬ್‌ನಲ್ಲಿ ದ್ವಿತೀಯ ಪಿಯು ತರಗತಿಗಳನ್ನು ನಡೆಸಲಾಗುತ್ತಿದೆ. ಕಾಲೇಜುಗಳ ಬಾಗಿಲು ಮುಚ್ಚಿರುವ ಈ ಸಂದರ್ಭದಲ್ಲಿ ತುಂಬಾ ಸಹಕಾರಿಯಾಗಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.

ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯು ಎಲ್ಲ ಸಂಯೋಜನೆಯ (ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗ) ಅಧ್ಯಾಯಗಳನ್ನು ನುರಿತು ಉಪನ್ಯಾಸಕರು ಬೋಧಿಸಿದ್ದಾರೆ. ಇವುಗಳನ್ನು ರೆಕಾರ್ಡ್‌ ಮಾಡಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತಿದೆ.

‘ನಮ್ಮ ಸಂಯೋಜನೆಯ ಎಲ್ಲ ವಿಷಯಗಳ ಬೋಧನೆ ಮಾಡುತ್ತಿದ್ದಾರೆ. ಒಂದು ತಿಂಗಳಿನಿಂದ ತರಗತಿಗಳನ್ನು ಕೇಳುತ್ತಿದ್ದೇನೆ. ನೋಟ್‌ಗಳನ್ನು ಕೂಡ ಕೊಡುತ್ತಿರುವುದರಿಂದ ಸಹಾಯವಾಗಿದೆ’ ಎಂದು ವರ್ತೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಬಿಂದು ಹೇಳಿದರು.

‘ಕಾಲೇಜಿನ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಪಿಡಿಎಫ್‌ ರೂಪದಲ್ಲಿ ನೋಟ್ಸ್‌ಗಳನ್ನು ಹಾಕುತ್ತಾರೆ. ವಿಡಿಯೊ ಪಾಠದಲ್ಲಿ ಏನಾದರೂ ಗೊಂದಲವಿದ್ದರೆ ನಮ್ಮ ಉಪನ್ಯಾಸಕರನ್ನು ಕೇಳುತ್ತೇವೆ. ಅವರು ಉತ್ತರಿಸುತ್ತಾರೆ’ ಎಂದು ಬೆಸೆಂಟ್ ಪಿಯು ಕಾಲೇಜಿನ ಕಾವ್ಯಾ ಹೇಳಿದರು.

‘ವೇಳಾಪಟ್ಟಿ ನಿಗದಿ ಮಾಡಿದ್ದಾರೆ. ಅದರಂತೆ ತರಗತಿಗಳನ್ನು ಕೇಳುತ್ತೇನೆ. ಆ ಸಮಯದಲ್ಲಿ ಪಾಠ ಕೇಳಲು ಸಾಧ್ಯವಾಗದಿದ್ದರೆ, ಉಪನ್ಯಾಸಕರಿಂದ ವಿಡಿಯೊದ ಲಿಂಕ್‌ ತರಿಸಿಕೊಂಡು ಬಿಡುವಾದಾಗ ನೋಡುತ್ತೇನೆ’ ಎಂದು ಬೆಸೆಂಟ್ ಕಾಲೇಜಿನ ಸ್ವಾತಿ ನಾಯಕ್‌ ಹೇಳಿದರು.

‘ಕಾಲೇಜಿನಲ್ಲಿ ತರಗತಿಗಳು ನಡೆಯುತ್ತಿಲ್ಲ. ಟ್ಯೂಷನ್‌ಗೆ ಹೋಗಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಯೂಟ್ಯೂಬ್‌ ಮೂಲಕ ಬೋಧಿಸುತ್ತಿರುವುದರಿಂದ ತುಂಬಾ ಸಹಾಯವಾಗಿದೆ’ ಎಂದು ಅತ್ತಿಗುಪ್ಪೆ ಸರ್ಕಾರಿ ಪಿಯು ಕಾಲೇಜಿನ ಲಕ್ಷ್ಮೀದೇವಿ ಹೇಳಿದರು.

‘ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ 20 ಸರ್ಕಾರಿ ಮತ್ತು 33 ಅನುದಾನಿತ ಕಾಲೇಜುಗಳಿಗೆ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಸಂಬಂಧಪಟ್ಟ ಕಾಲೇಜುಗಳ ಪ್ರಾಚಾರ್ಯರು ಮತ್ತು ಆಯಾ ವಿಷಯಗಳ ಉಪನ್ಯಾಸಕರು ಇದರ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ. ರಾಜ್ಯದ ಯಾವುದೇ ವಿದ್ಯಾರ್ಥಿಯಾದರೂ ಪಾಠ ಕೇಳಬಹುದಾಗಿದೆ’ ಎಂದು ಬೆಂಗಳೂರು ದಕ್ಷಿಣ ಡಿಡಿಪಿಯು ಬಿ.ಎಂ. ರಾಜಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿದ್ಯಾರ್ಥಿಗಳು ಪ್ರಶ್ನೆಗಳಿದ್ದರೆ ಉಪನ್ಯಾಸಕರಿಗೆ ಕರೆ ಮಾಡಿ ಕೇಳಬಹುದು. ಆಯಾ ಕಾಲೇಜುಗಳಲ್ಲಿ ವಾಟ್ಸ್‌ಆ್ಯಪ್‌ ಗುಂಪುಗಳನ್ನು ಮಾಡಲಾಗಿದೆ. ವಾಟ್ಸ್‌ಆ್ಯಪ್‌ನಲ್ಲೇ ಲಿಂಕ್‌ ಕಳುಹಿಸಲಾಗುತ್ತದೆ. ಎಲ್ಲ ವಿಷಯದ ಪಾಠಗಳನ್ನು ಪಾಠವನ್ನು ಅಪ್‌ಲೋಡ್‌ ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.

*
ವಿದ್ಯಾರ್ಥಿಗಳು ಪ್ರಶ್ನೆಗಳಿದ್ದರೆ ಉಪನ್ಯಾಸಕರಿಗೆ ಕರೆ ಮಾಡಿ ಕೇಳಬಹುದು. ಆಯಾ ಕಾಲೇಜುಗಳಲ್ಲಿ ವಾಟ್ಸ್‌ಆ್ಯಪ್‌ ಗುಂಪುಗಳನ್ನು ಮಾಡಲಾಗಿದೆ. ವಾಟ್ಸ್‌ಆ್ಯಪ್‌ನಲ್ಲೇ ಲಿಂಕ್‌ ಕಳುಹಿಸಲಾಗುತ್ತದೆ. ಎಲ್ಲ ವಿಷಯದ ಪಾಠಗಳನ್ನು ಪಾಠವನ್ನು ಅಪ್‌ಲೋಡ್‌ ಮಾಡಲಾಗುತ್ತಿದೆ
-ಬಿ.ಎಂ. ರಾಜಕುಮಾರ್‌, ಬೆಂಗಳೂರು ದಕ್ಷಿಣ ಡಿಡಿಪಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT