ಶನಿವಾರ, ಜೂಲೈ 11, 2020
24 °C

ಕತಾರ್‌ನಿಂದ ರಾಜ್ಯಕ್ಕೆ 180 ಕನ್ನಡಿಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ಕತಾರ್‌ನಲ್ಲಿ ಸಿಲುಕಿದ್ದ 180 ಕನ್ನಡಿಗರು ವಿಶೇಷ ಖಾಸಗಿ ವಿಮಾನದ ಮೂಲಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಂಗಳವಾರ ಬಂದಿಳಿದರು.

ಕೇಂದ್ರ ಸರ್ಕಾರವು ಮೇ 22ರಂದು ಮೊದಲ ವಿಮಾನದಲ್ಲಿ 177 ಜನರನ್ನು ಬೆಂಗಳೂರಿಗೆ ಕರೆ ತಂದಿತ್ತು. ಜೂನ್ 15ರಂದು ಪ್ರತ್ಯೇಕ ಖಾಸಗಿ ವಿಮಾನದಲ್ಲಿ 185 ಮಂದಿ ರಾಜ್ಯಕ್ಕೆ ಮರಳಿದ್ದರು.

'ಈ ಸಲ ಭಾರತೀಯ ಸಮುದಾಯ ಹಿತೈಷಿ ವೇದಿಕೆಯ (ಐಸಿಬಿಎಫ್) ನೇತೃತ್ವದಲ್ಲಿ ಕತಾರ್ ಕರ್ನಾಟಕ ಸಂಘವು ಕತಾರ್‌ನಿಂದ ಬೆಂಗಳೂರಿಗೆ ವಿಮಾನ ಸೇವೆ ಕಲ್ಪಿಸಿತು. ಸಂಘದ ವತಿಯಿಂದ 5 ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣ ವ್ಯವಸ್ಥೆ ಮಾಡಿದ್ದೇವೆ' ಎಂದು ಐಸಿಬಿಎಫ್ ಜಂಟಿ ಕಾರ್ಯದರ್ಶಿ ಸುಬ್ರಹ್ಮಣ್ಯ ಹೆಬ್ಬಾಗಿಲು ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು