ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಹಕಾರ ಬ್ಯಾಂಕ್‌: ಏಕರೂಪದ ತಂತ್ರಾಂಶದಿಂದ ಪಾರದರ್ಶಕತೆ’

30 ಲಕ್ಷ ರೈತರಿಗೆ ₹20,810 ಕೋಟಿ ಬೆಳೆ ಸಾಲ ವಿತರಣೆ ಗುರಿ
Last Updated 7 ಜೂನ್ 2021, 18:36 IST
ಅಕ್ಷರ ಗಾತ್ರ

ರಾಜರಾಜೇಶ್ವರಿ ನಗರ: ‘ರಾಜ್ಯದಲ್ಲಿರುವ 21 ಡಿಸಿಸಿ ಬ್ಯಾಂಕ್ ಹಾಗೂ 5,400 ಕೃಷಿ ಪತ್ತಿನ ಸಹಕಾರ ಬ್ಯಾಂಕ್‍ಗಳಿಗೆ ಏಕರೂಪದ ತಂತ್ರಾಂಶ ರೂಪಿಸುವ ಕಾರ್ಯ ಪ್ರಗತಿಯಲ್ಲಿದ್ದು, ಇದರಿಂದ ಪಾರದರ್ಶಕ ವ್ಯವಸ್ಥೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ರಾಮೋಹಳ್ಳಿಯಲ್ಲಿ ಬಿಡಿಸಿಸಿ ಬ್ಯಾಂಕ್ ಮತ್ತು ರೈತಪತ್ತಿನ ಸಹಕಾರ ಸಂಘ ನಿಯಮಿತ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ₹1.75 ಕೋಟಿ ಬಡ್ಡಿರಹಿತ ಸಾಲ ಮತ್ತು ಹಲವು ಸ್ತ್ರೀಶಕ್ತಿ ಸಂಘಗಳಿಗೆ ತಲಾ ₹5 ಲಕ್ಷ ಸಾಲ ವಿತರಿಸಿ ಮಾತನಾಡಿದರು.

‘ಏಕರೂಪದ ತಂತ್ರಾಂಶ ರೂಪಿಸಲು ಸರ್ಕಾರವು ₹90 ಕೋಟಿ ಮೀಸಲಿಟ್ಟಿದೆ. ಇದು ಅನುಷ್ಠಾನಗೊಂಡರೆ ರಾಜ್ಯದಾದ್ಯಂತ ರೈತರಿಗೆ ಎಷ್ಟು ಸಾಲ ನೀಡಲಾಗಿದೆ? ಅರ್ಹರಿಗೆ ಸರಿಯಾಗಿ ಸಾಲ ಲಭಿಸುತ್ತಿದೆಯೇ? ವಿತರಣೆ ಹೇಗೆ ಆಗುತ್ತಿದೆ ಎಂಬುದನ್ನು ಬೆಂಗಳೂರಿನಲ್ಲೇ ಕುಳಿತು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ’ ಎಂದು ಸಚಿವರು ತಿಳಿಸಿದರು.

‘ಹೆಚ್ಚುವರಿ ಅನುದಾನ ನೀಡುವಂತೆ ನಬಾರ್ಡ್‌ಗೂ ಕೇಳಿಕೊಳ್ಳಲಾಗಿದೆ. ಎಪಿಎಂಸಿಗಳಿಗೆ ಸುಮಾರು ₹302 ಕೋಟಿ ನೀಡುವಂತೆ ಮನವಿ ಮಾಡಲಾಗಿದೆ’ ಎಂದರು.

‘ಯಾವುದೇ ರೈತರಿಗೂ ಸಾಲ ಇಲ್ಲ ಎನ್ನುವುದಕ್ಕೆ ಆಸ್ಪದ ಇರಬಾರದು. ಎಲ್ಲರಿಗೂ ಸಾಲ ದೊರೆಯಬೇಕು ಎಂಬುದು ನಮ್ಮ ಉದ್ದೇಶ. ರೈತರಿಗೆ ಸಾಲ ನೀಡಿದರೆಶೇಕಡಾ 90 ರಷ್ಟು ಸಾಲವು ಬೇಗನೇ ಮರುಪಾವತಿಯಾಗುತ್ತವೆ. ಇನ್ನು ಸ್ತ್ರೀ ಶಕ್ತಿ ಸಂಘಗಳು, ಸ್ವಸಹಾಯ ಸಂಘಗಳಿಗೆ ಸಾಲ ನೀಡಿದರೆ ಶೇ.100 ಮರುಪಾವತಿಯಾಗುತ್ತಿದೆ’ ಎಂದು ಸಚಿವರು ಮಾಹಿತಿ ನೀಡಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಹನುಮಂತಯ್ಯ, ‘ಮಳೆಗಾಲ ಪ್ರಾರಂಭವಾಗಿದ್ದು, ರೈತರು ಕೊರೊನಾ ಸೇರಿದಂತೆ ಇನ್ನಿತರ ತೊಂದರೆಗೆ ಒಳಗಾಗಿದ್ದಾರೆ. ಕೃಷಿ ಚಟುವಟಿಕೆಕೆ ಈಗಾಗಲೇ ₹80 ಕೋಟಿ ಬೆಳೆ ಸಾಲ ನೀಡಲಾಗೊದ್ದಿ. ಈ ತಿಂಗಳ 20 ರ ಒಳಗಾಗಿ ₹25 ಕೋಟಿ ಸಾಲವನ್ನು ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ವ್ಯಾಪ್ತಿಯ ರೈತರಿಗೆ ವಿತರಿಸಲಾಗುವುದು’ ಎಂದರು.

ರಾಮೋಹಳ್ಳಿ ರೈತ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿ.ವೇಣುಗೋಪಾಲ್ ಮತ್ತು ಎಸ್.ಚೇತನ್ ಅವರು 1,500 ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT