ಪಾಪದ ಫಲವನ್ನು ಅನುಭವಿಸಲೇಬೇಕು: ರಾಘವೇಶ್ವರ ಶ್ರೀ

7

ಪಾಪದ ಫಲವನ್ನು ಅನುಭವಿಸಲೇಬೇಕು: ರಾಘವೇಶ್ವರ ಶ್ರೀ

Published:
Updated:

ಬೆಂಗಳೂರು: ‘ಮಾಡಿದ ಪಾಪ ಹಾಗೂ ತಪ್ಪಿನ ಫಲವನ್ನು ಜೀವನದಲ್ಲಿ ಅನುಭವಿಸಿಯೇ ಹೋಗಬೇಕು, ಅದು ವಿಧಿ’ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.

ಗಿರಿನಗರದ ರಾಮಚಂದ್ರಾಪುರ ಮಠದ ಶಾಖೆಯಲ್ಲಿ ಬುಧವಾರ ಆಯೋಜಿಸಿದ್ದ ‘ಕೃಷ್ಣಕಥಾ ಸಪ್ತಾಹ’ ದಲ್ಲಿ ಅವರು ಮಾತನಾಡಿದರು.

‘ಕೃಷ್ಣನಿಗೆ ಪೂತನಿಯು ಎದೆಹಾಲನ್ನು ಉಣಿಸಿ ಸಂಹರಿಸಲು ಪ್ರಯತ್ನಿಸಿದಳು. ಆದರೆ ಬಾಲ ಕೃಷ್ಣ ಅವಳ ಎದೆಹಾಲು ಕುಡಿಯುತ್ತಾ ಆಕೆಯನ್ನೇ ಅಪಹರಿಸಿ ಶಿಕ್ಷಿಸಿದ. ಅವಳ ಪಾಪಕ್ಕೆ ತಕ್ಕ ಶಿಕ್ಷ ಕೊಟ್ಟ. ಆ ನಂತರ ಗೋಪಿಕೆಯರು ಕೃಷ್ಣನನ್ನು ಗೋಮೂತ್ರದಿಂದ ಸ್ನಾನ ಮಾಡಿಸಿ ರಕ್ಷೆ ಮಾಡಿದರು. ಗೋವಿನ ಬಾಲದಿಂದ ದೃಷ್ಟಿ ತೆಗೆದರು ಎಂದು ಭಾಗವತದಲ್ಲಿ ಉಲ್ಲೇಖಿಸಲಾಗಿದೆ. ಇದು ಗೋವಿನ ಮಹತ್ವ ತಿಳಿಸುತ್ತದೆ’ ಎಂದರು.

ಸೆಪ್ಟೆಂಬರ್‌ 8ರವರೆಗೆ ಪ್ರತಿದಿನ ಸಂಜೆ ಮಠದಲ್ಲಿ ಸಂಜೆ 6ರಿಂದ 9 ಗಂಟೆವರೆಗೆ ಪ್ರವಚನ, ಗಾಯನ ಸೇರಿದಂತೆ ವಿಶಿಷ್ಟ ಕಾರ್ಯಕ್ರಮಗಳು ನಡೆಯಲಿವೆ.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 2

  Frustrated
 • 3

  Angry

Comments:

0 comments

Write the first review for this !