ಶನಿವಾರ, ನವೆಂಬರ್ 16, 2019
24 °C

ರೈಲಿನಲ್ಲಿ ಫಲಕದಲ್ಲಿ ಕನ್ನಡ ಮಾಯ

Published:
Updated:
Prajavani

ಬೆಂಗಳೂರು: ಸೋಲಾಪುರ–ಬೆಂಗಳೂರು ರೈಲಿನಲ್ಲಿ ಕನ್ನಡ ಇಲ್ಲದ ಫಲಕಗಳು ರಾರಾಜಿಸುತ್ತಿವೆ.

ಬೋಗಿಗಳಲ್ಲಿರುವ ಪ್ರಯಾಣಿಕ ಮಾರ್ಗಸೂಚಿ ಫಲಕಗಳಲ್ಲಿ ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸೂಚನೆಗಳಿವೆ. ಮಹಾರಾಷ್ಟ್ರದ ಸೋಲಾಪುರಕ್ಕೆ ಹೋಗುವ ಈ ರೈಲಿನಲ್ಲಿ ದಕ್ಷಿಣ ರೈಲ್ವೆಯಿಂದ ಹಾಕಿರುವ ಫಲಕದಲ್ಲಿ ಮಲಯಾಳಂ ಭಾಷೆ ಇದೆ.

‘ನೈರುತ್ಯ ರೈಲ್ವೆಯಲ್ಲಿ ಹಿಂದಿ, ಇಂಗ್ಲಿಷ್ ಜತೆಗೆ ಕನ್ನಡ ಭಾಷೆ ಇರುತ್ತದೆ. ಇದು ದಕ್ಷಿಣ ರೈಲ್ವೆಯ ಫಲಕವಾಗಿರುವ ಕಾರಣ ಮಲಯಾಳಂನಲ್ಲಿದೆ’ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದರು.

ಸೋಲಾಪುರ–ಬೆಂಗಳೂರು ರೈಲಿನಲ್ಲಿ ದಕ್ಷಿಣ ರೈಲ್ವೆಯ ಕೆಲ ಬೋಗಿಗಳು ಸಂಯೋಜನೆಗೊಂಡಿರಬಹುದು ಎಂದು ಅವರು ತಿಳಿಸಿದರು.

 

ಪ್ರತಿಕ್ರಿಯಿಸಿ (+)