ಸಾಯಿ ಲೇಔಟ್‌ನಲ್ಲಿ ಜಲಾವೃತಗೊಂಡ ಪ್ರದೇಶದ ಜನರಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ಬಿಬಿಎಂಪಿ ಸಿಬ್ಬಂದಿ ಜೆಸಿಬಿ ಮೂಲಕ ವಿತರಿಸಿದರು
ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.
ಸಾಯಿ ಲೇಔಟ್‌ನಲ್ಲಿ ಜಲಾವೃತಗೊಂಡ ಪ್ರದೇಶದಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಸಾಕು ನಾಯಿಗಳು ಸಾಗಿದರು
ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.
3 ಕ್ವಿಂಟಲ್ ರಾಗಿ ನೀರು ಪಾಲು
ವೃಷಭಾವತಿ ರಾಜಕಾಲುವೆ ಸಮೀಪದ ವಸತಿ ಸಮುಚ್ಚಯದ ಸೆಲ್ಲರ್‌ಗೆ ಮಳೆ ನೀರು ನುಗ್ಗಿ 20 ಕ್ಕೂ ಹೆಚ್ಚು ಕಾರುಗಳಿಗೆ ಹಾನಿಯಾಗಿದೆ. ಕೃಷ್ಣಪ್ಪ ಲೇಔಟ್‌ನ ಗಿರಣಿಗೆ (ರಾಗಿ ಮಿಲ್) ಚರಂಡಿ ನೀರು ನುಗ್ಗಿ ಮೂರು ಕ್ವಿಂಟಲ್ ರಾಗಿ ನೀರು ಪಾಲಾಗಿದೆ. ರಾಜರಾಜೇಶ್ವರಿನಗರದ ಶಕ್ತಿ ಹಿಲ್ಸ್ ರೆಸಾರ್ಟ್ ತಡೆಗೋಡೆ ಕುಸಿದು ಬಿದ್ದಿದೆ. ವೃಷಾಭವತಿ ರಾಜಕಾಲುವೆ ಬಳಿಯ ಎರಡು ಮನೆ ಹಾಗೂ ಜವರೇಗೌಡನ ದೊಡ್ಡಿಯ ಮೂರು ಮನೆಗಳಿಗೆ ನೀರು ನುಗ್ಗಿದೆ. ಬಿಬಿಎಂಪಿ ವಲಯ ಆಯುಕ್ತ ಡಾ.ಬಿ.ಸಿ.ಸತೀಶ್, ಜಂಟಿ ಆಯುಕ್ತೆ ಡಾ.ಆರತಿ ಆನಂದ್, ಕಾರ್ಯಪಾಲಕ ಎಂಜಿನಿಯರ್ ಪಾಪರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ, ಜೆಸಿಬಿ ಸಹಾಯದಿಂದ ಮಳೆ ನೀರು ಹೊರ ಹಾಕಿಸಿದರು.
ಅನಿಲ್ ಕುಂಬ್ಳೆ ವೃತ್ತದಲ್ಲಿ ಮಳೆನೀರು ಚರಂಡಿಗೆ ಹೋಗಲು ಬಿಬಿಎಂಪಿ ಕಾರ್ಮಿಕರು ದುರಸ್ತಿ ಕಾರ್ಯ ನಡೆಸಿದರು
ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಕೋರಮಂಗಲ 1ನೇ ಬ್ಲಾಕ್‌ನಲ್ಲಿ ಮನೆಯಿಂದ ನೀರನ್ನು ಹೊರಹಾಕಿದ ಬಾಲಕಿ
ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ್
ಬೆಂಗಳೂರಿನಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಯಿಂದಾಗಿ ಹೊಸೂರು ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು
ಪ್ರಜಾವಾಣಿ ಚಿತ್ರ:ರಂಜು ಪಿ
ಕೇಂದ್ರ ರೇಷ್ಮೆ ಮಂಡಳಿ ಸಮೀಪದ ವಸತಿ ನಿಲಯದ ನೆಲಅಂತಸ್ತಿಗೆ ಮಳೆ ನೀರು ನುಗ್ಗಿತ್ತು
ಪ್ರಜಾವಾಣಿ ಚಿತ್ರ:ರಂಜು ಪಿ