ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ: ವಾಡಿಕೆಗಿಂತ ದುಪ್ಪಟ್ಟು ಮಳೆ

ಧಾರಾಕಾರ ಮಳೆಯಿಂದ ವಾತಾವರಣ ತಂಪು
Published 26 ಮೇ 2024, 0:49 IST
Last Updated 26 ಮೇ 2024, 0:49 IST
ಅಕ್ಷರ ಗಾತ್ರ

ಬೆಂಗಳೂರು: ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ಮಳೆಯ ತೀವ್ರ ಅಭಾವ ಎದುರಿಸಿದ್ದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಮೇ ತಿಂಗಳಿನಲ್ಲಿ ವಾಡಿಕೆಗಿಂತಲೂ ದುಪ್ಪಟ್ಟು ಮಳೆಯಾಗಿದೆ.

ಬೆಂಗಳೂರು ನಗರದಲ್ಲಿ ಏಪ್ರಿಲ್‌ನಲ್ಲಿ ಶೇ 96ರಷ್ಟು ಮಳೆ ಕೊರತೆ ಕಾಣಿಸಿತ್ತು. ಈ ಪ್ರದೇಶದಲ್ಲಿ ಮೇ 1ರಿಂದ 24ರ ಅವಧಿಯಲ್ಲಿ ಶೇ 105ರಷ್ಟು ಅಧಿಕ ಮಳೆಯಾಗಿದೆ. ವಾಡಿಕೆ 7 ಸೆಂ.ಮೀ ಇದ್ದು, 14.3 ಸೆಂ.ಮೀ ಮಳೆಯಾಗಿದೆ.

ಬೆಂಗಳೂರು ಗ್ರಾಮಾಂತರದಲ್ಲಿ ಶೇ 91ರಷ್ಟು (ಏಪ್ರಿಲ್) ಕೊರತೆ ಎದುರಾಗಿತ್ತು. ಈಗ ಅಲ್ಲಿ ಶೇ 92ರಷ್ಟು ಅಧಿಕ ಮಳೆಯಾಗಿದೆ. ಜನವರಿ 1ರಿಂದ ಮೇ 24ರವರೆಗೆ ಬೆಂಗಳೂರು ನಗರದ ವಾಡಿಕೆ ಮಳೆ ಪ್ರಮಾಣ 12.8 ಸೆಂ.ಮೀ ಆಗಿತ್ತು. ಆದರೆ, 14.5 ಸೆಂ.ಮೀ ಮಳೆಯಾಗಿ, ಶೇ 13ರಷ್ಟು ಅಧಿಕ ಮಳೆಯಾದಂತೆ ಆಗಿದೆ.

ಗ್ರಾಮಾಂತರ ಜಿಲ್ಲೆಯಲ್ಲಿ ಜನವರಿ 1ರಿಂದ ಮೇ 14ಕ್ಕೆ ವಾಡಿಕೆ ಮಳೆ ಪ್ರಮಾಣ 11.8 ಸೆಂ.ಮೀ. ಅಲ್ಲೀಗ 13.2 ಸೆಂ.ಮೀ ಮಳೆಯಾಗಿದೆ. ಶೇ 12ರಷ್ಟು ಅಧಿಕ ಮಳೆ ಸುರಿದಿದೆ.

ಏಳು ದಿನಗಳ ಅವಧಿಯಲ್ಲೇ ಹೆಚ್ಚು: ಈ ತಿಂಗಳ ಆರಂಭದಲ್ಲಿ ಜೋರು ಮಳೆ ಇರಲಿಲ್ಲ. ಆದರೆ, ಕಳೆದ ಏಳು ದಿನಗಳ ಅವಧಿಯಲ್ಲಿ ಈ ಎರಡು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿದು ವಾತಾವರಣ ತಂಪಾಗಿಸಿದೆ.

ಮೇನಲ್ಲಿ ಅಧಿಕ ಮಳೆ ಸುರಿದ ಬೆಂಗಳೂರು ನಗರ ಜಿಲ್ಲೆಯ ಪ್ರದೇಶಗಳು (ಸೆಂ.ಮೀಗಳಲ್ಲಿ)

ಇನ್ನೂ ಐದು ದಿನ ಮಳೆ

ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಭಾನುವಾರದಿಂದ ಐದು ದಿನ ಅಲ್ಲಲ್ಲಿ ಮಳೆ ಆಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಗಲು ವೇಳೆಯಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಸೂಚನೆ ನೀಡಿದೆ.

ಆನೇಕಲ್‌ ತಾಲ್ಲೂಕು
ಹೋಬಳಿ;ವಾಡಿಕೆ;ಸುರಿದ ಮಳೆ
ಆನೇಕಲ್‌–1;8.5;15.2
ಅತ್ತಿಬೆಲೆ–1;7.2;10.8
ಆನೇಕಲ್‌–2;8;14.1
ಸರ್ಜಾಪುರ–3;6.6;9.1

ಬೆಂಗಳೂರು ಉತ್ತರ ತಾಲ್ಲೂಕು
ಹೋಬಳಿ;ವಾಡಿಕೆ;ಸುರಿದ ಮಳೆ
ಬೆಂಗಳೂರು ಉತ್ತರ–1;7.8;14.3
ಯಶವಂತಪುರ–2;6.9;19.9
ದಾಸನಪುರ–2;7.2;17.7

ಬೆಂಗಳೂರು ದಕ್ಷಿಣ ತಾಲ್ಲೂಕು
ಉತ್ತರಹಳ್ಳಿ–4;7.1.;22.2
ಕೆಂಗೇರಿ–3;6.6;22.1

ಬೆಂಗಳೂರು ಪೂರ್ವ ತಾಲ್ಲೂಕು
ಮಹದೇವಪುರ–2;6.6;13.1
ಮಾರತಹಳ್ಳಿ;7.2;14.4

ಯಲಹಂಕ ತಾಲ್ಲೂಕು
ಯಲಹಂಕ–1;5.3;13.2
ಹೆಸರಘಟ್ಟ–2;6.7;16.6

ಮೇನಲ್ಲಿ ಅಧಿಕ ಮಳೆ ಸುರಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರದೇಶಗಳು (ಸೆಂ.ಮೀಗಳಲ್ಲಿ)

ದೇವನಹಳ್ಳಿ ತಾಲ್ಲೂಕು
ಹೋಬಳಿ;ವಾಡಿಕೆ;ಸುರಿದ ಮಳೆ
ದೇವನಹಳ್ಳಿ;6.2;15.7
ಚನ್ನರಾಯಪಟ್ಟಣ;6.1;16.3
ವಿಜಯಪುರ;6.1;10.6

ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ;7.5;11.8
ಮಧುರೆ;7.1;16.1
ಸಾಸಲು;6;12.4

ಹೊಸಕೋಟೆ
ಅನುಗೊಂಡಹಳ್ಳಿ;5.7;8.9
ಸುಲಿಬೆಲೆ;6.1;16

ನೆಲಮಂಗಲ
ನೆಲಮಂಗಲ–1;8.6;13.8
ಸೋಂಪುರ;7;7.2
ನೆಲಮಂಗಲ–2;7.6;11.6

ನಗರದ ರಸ್ತೆಯೊಂದರಲ್ಲಿ ಸಂಗ್ರಹವಾಗಿದ್ದ ಮಳೆನೀರು (ಸಾಂದರ್ಭಿಕ ಚಿತ್ರ)
ನಗರದ ರಸ್ತೆಯೊಂದರಲ್ಲಿ ಸಂಗ್ರಹವಾಗಿದ್ದ ಮಳೆನೀರು (ಸಾಂದರ್ಭಿಕ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT