ಬೆಂಗಳೂರು: ನಾಲ್ಕು ವರ್ಷಗಳ ಬಳಿಕ ನಗರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಜೂನ್ ಮತ್ತು ಜುಲೈ ತಿಂಗಳಲ್ಲಿ 2016ರ ನಂತರ ಅಧಿಕ ಮಳೆಯಾಗಿರುವುದನ್ನು ಹವಾಮಾನ ಇಲಾಖೆಯ ಅಂಕಿಅಂಶಗಳು ತಿಳಿಸಿವೆ.

ನಗರದಲ್ಲಿ 2016ರ ಜೂನ್-ಜುಲೈನಲ್ಲಿ ಗರಿಷ್ಠ 20 ಸೆಂ.ಮೀ ಮಳೆ ಸುರಿದಿತ್ತು. 2017ರಲ್ಲಿ ಇದೇ ಅವಧಿಯಲ್ಲಿ 2 ಸೆಂ.ಮೀ ಮಳೆಯಾಯಿತು.

2018ರಲ್ಲಿ ಗರಿಷ್ಠ 9 ಸೆಂ.ಮೀ ಹಾಗೂ 2019ರಲ್ಲಿ 8 ಸೆಂ.ಮೀ ಮಳೆಯಾಗಿದೆ. ಆದರೆ, ಈ ಸಲ ಜುಲೈನಲ್ಲಿ 17 ಸೆಂ.ಮೀ ಮಳೆ ದಾಖಲಾಗಿದೆ.

'ನಗರದಲ್ಲಿ ಜೂನ್ನಲ್ಲಿ 7.1 ಸೆಂ.ಮೀ ಹಾಗೂ ಜುಲೈನಲ್ಲಿ 9.5 ಸೆಂ.ಮೀ ವಾಡಿಕೆ ಮಳೆ ನಿರೀಕ್ಷಿಸಿದ್ದೆವು. ಆದರೆ, ಎರಡೂ ತಿಂಗಳಿನಲ್ಲಿ ವಾಡಿಕೆಗಿಂತ ಶೇ 180ರಷ್ಟು ಹೆಚ್ಚು ಮಳೆಯಾಗಿದೆ‘ ಎಂದು ಕೃಷಿ ಹವಾಮಾನ ತಜ್ಞ ಎಚ್.ಎಸ್.ಶಿವರಾಮು ತಿಳಿಸಿದರು.

'ಮುಂಗಾರು ಮಾರುತಗಳ ಮೇಲೆ ಪ್ರಭಾವ ಬೀರುವ ಎಲ್ನಿನೊ ವೈಪರೀತ್ಯ ಹೆಚ್ಚು ಪರಿಣಾಮ ಬೀರದ ಕಾರಣ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ‘ ಎಂದರು.

* ಈ ಮುಂಗಾರಿನಲ್ಲಿ ಬೆಂಗಳೂರು ವಾಡಿಕೆಗಿಂತ ಹೆಚ್ಚು ಮಳೆ ಕಂಡಿದೆ. ಆಗಸ್ಟ್ ನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಮಳೆ ಬೀಳುವ ನಿರೀಕ್ಷೆ ಇದೆ.

– ಎಚ್.ಎಸ್.ಶಿವರಾಮು, ಕೃಷಿ ಹವಾಮಾನ ತಜ್ಞ, ಜಿಕೆವಿಕೆ

ಬೆಂಗಳೂರಿನ ಮಳೆ ಪ್ರಮಾಣ (ಸೆಂ.ಮೀಗಳಲ್ಲಿ)

ವರ್ಷ;ಜೂನ್;ಜುಲೈ
2010;10.5;10
2011;5.7;9.2
2012;7;6.6
2013;17.7;13.9
2014;17.2;10
2015;8.5;9.4
2016;19.7;20.9
2017;2.5;5.9
2018;9.1;8.4
2019;8.3;8.7
2020;13.2;17.1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.