ರಾಜರಾಜೇಶ್ವರಿನಗರ: ಸುತ್ತಮುತ್ತಲ ಬಡಾವಣೆಗಳ ಸಾವಿರಾರು ಜನರು ‘ಸುಗ್ಗಿ ಸಂಭ್ರಮ 2026’ ಅನ್ನು ಅದ್ದೂರಿಯಾಗಿ ಆಚರಿಸಿದರು.

ಮಾಗಡಿ ಮುಖ್ಯರಸ್ತೆಯ ಅಂಜನಾನಗರದಲ್ಲಿ ‘ಸುಗ್ಗಿ ಸಂಭ್ರಮ 2026’ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರು ಎಳ್ಳು-ಬೆಲ್ಲ ವಿನಮಯ ಮಾಡಿಕೊಂಡರು. ಪೊಂಗಲ್ ಹಂಚಿದರು. ಶಾಸಕ ಎಸ್.ಟಿ.ಸೋಮಶೇಖರ್ ಗೋವುಗಳಿಗೆ ಪೂಜೆ ಸಲ್ಲಿಸಿ, ಸಾವಿರಾರು ಜನರಿಗೆ ಕಡಲೆಕಾಯಿ, ಅವರೇಕಾಯಿ, ಕಬ್ಬು, ಗೆಣಸು ವಿತರಿಸಿದರು.

ಜಾನಪದ ಕಲೆಗಳ ಪ್ರದರ್ಶನವನ್ನು ಜನರು ವೀಕ್ಷಿಸಿದರೆ, ಹಾಡು, ನೃತ್ಯ, ತಮಟೆ, ನಗಾರಿ ಸದ್ದಿಗೆ ಕುಣಿದು ಕುಪ್ಪಳಿಸಿದರು.

ಎಸ್.ಟಿ.ಸೋಮಶೇಖರ್ ಮಾತನಾಡಿ, ‘ಸಂಸ್ಕೃತಿ, ಪರಂಪರೆ, ಕಾಪಾಡುವಲ್ಲಿ ರೈತರು ನೇರ ಕಾರಣರಾಗಿದ್ದು. ಅವರ ಸರ್ವಾಂಗೀಣ ಅಭಿವೃದ್ಧಿಗೆ ದೃಢ ಸಂಕಲ್ಪ ಮಾಡಲಾಗಿದೆ’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಶ್ರೀಧರ್, ರೇವಣ್ಣ ಸಿದ್ದಯ್ಯ, ಮೈಲಸಂದ್ರ ನಾಗರಾಜು, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಎಂ.ಸತೀಶ್, ಲಕ್ಷ್ಮಿ, ಸುಮಾ ಜನಾರ್ದನ್, ಶೃತಿ, ಅಂಜನಾನಗರ ಎಂ.ಗಂಗರಾಜು, ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಆರ್.ಶಿವಮಾದಯ್ಯ, ಕೆ.ಎಸ್.ಪರ್ವೀಜ್, ರಾಜ್ಯ ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಅಮೃತ್ಗೌಡ, ಮುಖಂಡರಾದ ಜಬೀನಾತಾಜ್ ಪರ್ವೀಜ್, ಲತಾ ಮಂಜುನಾಥ್, ಸಿ.ಎನ್.ಮೂರ್ತಿ, ಕೆ.ಎನ್.ದೇವರಾಜ್, ಕಾಚೋಹಳ್ಳಿ ಲೋಕೇಶ್, ಹೇರೋಹಳ್ಳಿ ಸೂರಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.