ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜರಾಜೇಶ್ವರಿನಗರ| ಕುಡಿಯುವ ನೀರಿಗೆ ಜನರ ಪರದಾಟ

ಚಿಕ್ಕರಾಮು
Published 2 ಮಾರ್ಚ್ 2024, 23:30 IST
Last Updated 2 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ಐಡಿಯಲ್ ಹೋಮ್ಸ್ ಬಡಾವಣೆಗೆ ಹೊಂದಿಕೊಂಡಿರುವ ಬಂಗಾರಪ್ಪ ನಗರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು,  ಜನರು ನೀರಿಗಾಗಿ ಕಿಲೋಮೀಟರ್‌
ಗಟ್ಟಲೆ ತೆರಳಬೇಕಾಗಿದೆ.

ಬಂಗಾರಪ್ಪನಗರದಲ್ಲಿ 1,500ಕ್ಕೂ ಹೆಚ್ಚು ಮನೆಗಳಿವೆ. ಬಿಬಿಎಂಪಿ ಕೊರೆಸಿರುವ ಆರು ಕೊಳವೆಬಾವಿಗಳು ಈ ಜನರಿಗೆ ಕುಡಿಯುವ ನೀರಿಗೆ ಆಸರೆ. ಆದರೆ, ಇಷ್ಟೂ ಕೊಳವೆಬಾವಿಗಳಲ್ಲಿ ನೀರು ಬತ್ತಿಹೋಗಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

‘ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ (ಬಸ್ ನಿಲ್ದಾಣದ ಹಿಂಭಾಗ) ನೀರು ಪೂರೈಕೆ ಮಾಡಿ ಒಂದು ತಿಂಗಳಾಗಿದೆ. ಪರಿಣಾಮವಾಗಿ, ನಾಗರಿಕರು ಆಟೊಗಳಲ್ಲಿ ಬಕೆಟ್, ದೊಡ್ಡ ಪಾತ್ರೆಗಳಲ್ಲಿ ನೀರು ತುಂಬಿಕೊಂಡು ತಂದು ಜೀವನ ಸಾಗಿಸಬೇಕಾಗಿದೆ’ ಎನ್ನುತ್ತಾರೆ ನಾಗರಾಜು ಮತ್ತು ಸವಿತಾ.

ಬಂಗಾರಪ್ಪನಗರದ ಕೆಲವು ರಸ್ತೆಗಳಲ್ಲಿ ಮೂರು ದಿನಕ್ಕೊಮ್ಮೆ ಒಂದು ತಾಸು ನೀರು ಬರುತ್ತದೆ. ಕೂಲಿ ಮಾಡಿ ಜೀವನ ನಡೆಸುತ್ತಿರುವ ನಾವು ದುಬಾರಿ ಹಣ ತೆತ್ತು ನೀರು ಕೊಳ್ಳುವುದು ಕಷ್ಟ. ಹಾಗಾಗಿ, ಡ್ರಮ್, ಸಣ್ಣ ಪುಟ್ಟ ಪಾತ್ರೆಗಳಲ್ಲಿ ನೀರು ಸಂಗ್ರಹಿಸಿಕೊಂಡು ಜೀವನ ಮಾಡಬೇಕಾಗಿದೆ’ ಎಂದು ಗೃಹಿಣಿ ಭಾರತಿ ನೋವು ತೋಡಿಕೊಂಡರು.

ಕಾವೇರಿ ನೀರು ಪೂರೈಕೆಗಾಗಿ ಪೈಪ್‍ ಅಳವಡಿಸಿ ಹಲವು ವರ್ಷಗಳಾಗಿದ್ದರೂ ಇಲ್ಲಿಯವರೆಗೂ ಕಾವೇರಿ ನೀರಿನ ಭಾಗ್ಯ ನಮಗೆ ದೊರೆತಿಲ್ಲ. ಸಿರಿವಂತರು, ಖಾಸಗಿ ಬಡಾವಣೆಗಳಲ್ಲಿರುವ ನಾಗರಿಕರಿಗಷ್ಟೇ ಜಲಮಂಡಳಿ ಅಧಿಕಾರಿಗಳು ನಿತ್ಯ ನೀರು ಪೂರೈಸುತ್ತಾರೆ. ನಮ್ಮಂತಹ ಬಡವರು ವಾಸಿಸುವ ಬಡಾವಣೆಗಳಿಗೆ ಶುದ್ಧ ಕುಡಿಯುವ ನೀರು ಕನಸಿನ ಮಾತಾಗಿದೆ. ನಾವೂ ಸರ್ಕಾರಕ್ಕೆ ಆಸ್ತಿ ತೆರಿಗೆ, ಜಿಎಸ್‍ಟಿ ಕಟ್ಟುತ್ತೇವೆ. ಆದರೆ, ಶುದ್ಧ ಕುಡಿಯುವ ನೀರು ಮಾತ್ರ ನಮಗೆ ಸಿಗುತ್ತಿಲ್ಲ’ ಎಂದು ತಾಯಮ್ಮ ಬೇಸರ ವ್ಯಕ್ತಪಡಿಸಿದರು.

: ಐಡಿಯಲ್ ಹೋಮ್ಸ್ ಬಡಾವಣೆಗೆ ಹೊಂದಿಕೊಂಡಿರುವ ಬಂಗಾರಪ್ಪ ನಗರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು,  ಜನರು ನೀರಿಗಾಗಿ ಕಿಲೋಮೀಟರ್‌
ಗಟ್ಟಲೆ ತೆರಳಬೇಕಾಗಿದೆ.

ಬಂಗಾರಪ್ಪನಗರದಲ್ಲಿ 1,500ಕ್ಕೂ ಹೆಚ್ಚು ಮನೆಗಳಿವೆ. ಬಿಬಿಎಂಪಿ ಕೊರೆಸಿರುವ ಆರು ಕೊಳವೆಬಾವಿಗಳು ಈ ಜನರಿಗೆ ಕುಡಿಯುವ ನೀರಿಗೆ ಆಸರೆ. ಆದರೆ, ಇಷ್ಟೂ ಕೊಳವೆಬಾವಿಗಳಲ್ಲಿ ನೀರು ಬತ್ತಿಹೋಗಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

‘ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ (ಬಸ್ ನಿಲ್ದಾಣದ ಹಿಂಭಾಗ) ನೀರು ಪೂರೈಕೆ ಮಾಡಿ ಒಂದು ತಿಂಗಳಾಗಿದೆ. ಪರಿಣಾಮವಾಗಿ, ನಾಗರಿಕರು ಆಟೊಗಳಲ್ಲಿ ಬಕೆಟ್, ದೊಡ್ಡ ಪಾತ್ರೆಗಳಲ್ಲಿ ನೀರು ತುಂಬಿಕೊಂಡು ತಂದು ಜೀವನ ಸಾಗಿಸಬೇಕಾಗಿದೆ’ ಎನ್ನುತ್ತಾರೆ ನಾಗರಾಜು ಮತ್ತು ಸವಿತಾ.

ಬಂಗಾರಪ್ಪನಗರದ ಕೆಲವು ರಸ್ತೆಗಳಲ್ಲಿ ಮೂರು ದಿನಕ್ಕೊಮ್ಮೆ ಒಂದು ತಾಸು ನೀರು ಬರುತ್ತದೆ. ಕೂಲಿ ಮಾಡಿ ಜೀವನ ನಡೆಸುತ್ತಿರುವ ನಾವು ದುಬಾರಿ ಹಣ ತೆತ್ತು ನೀರು ಕೊಳ್ಳುವುದು ಕಷ್ಟ. ಹಾಗಾಗಿ, ಡ್ರಮ್, ಸಣ್ಣ ಪುಟ್ಟ ಪಾತ್ರೆಗಳಲ್ಲಿ ನೀರು ಸಂಗ್ರಹಿಸಿಕೊಂಡು ಜೀವನ ಮಾಡಬೇಕಾಗಿದೆ’ ಎಂದು ಗೃಹಿಣಿ ಭಾರತಿ ನೋವು ತೋಡಿಕೊಂಡರು.

ಕಾವೇರಿ ನೀರು ಪೂರೈಕೆಗಾಗಿ ಪೈಪ್‍ ಅಳವಡಿಸಿ ಹಲವು ವರ್ಷಗಳಾಗಿದ್ದರೂ ಇಲ್ಲಿಯವರೆಗೂ ಕಾವೇರಿ ನೀರಿನ ಭಾಗ್ಯ ನಮಗೆ ದೊರೆತಿಲ್ಲ. ಸಿರಿವಂತರು, ಖಾಸಗಿ ಬಡಾವಣೆಗಳಲ್ಲಿರುವ ನಾಗರಿಕರಿಗಷ್ಟೇ ಜಲಮಂಡಳಿ ಅಧಿಕಾರಿಗಳು ನಿತ್ಯ ನೀರು ಪೂರೈಸುತ್ತಾರೆ. ನಮ್ಮಂತಹ ಬಡವರು ವಾಸಿಸುವ ಬಡಾವಣೆಗಳಿಗೆ ಶುದ್ಧ ಕುಡಿಯುವ ನೀರು ಕನಸಿನ ಮಾತಾಗಿದೆ. ನಾವೂ ಸರ್ಕಾರಕ್ಕೆ ಆಸ್ತಿ ತೆರಿಗೆ, ಜಿಎಸ್‍ಟಿ ಕಟ್ಟುತ್ತೇವೆ. ಆದರೆ, ಶುದ್ಧ ಕುಡಿಯುವ ನೀರು ಮಾತ್ರ ನಮಗೆ ಸಿಗುತ್ತಿಲ್ಲ’ ಎಂದು ತಾಯಮ್ಮ ಬೇಸರ ವ್ಯಕ್ತಪಡಿಸಿದರು.

  • ಕೊಳವೆ ಬಾವಿಗಳಲ್ಲಿ ಬತ್ತುತ್ತಿರುವ ಅಂತರ್ಜಲ

  • ಪೈಪ್ ಹಾಕಿದ್ದರೂ ಕಾವೇರಿ ನೀರು ಬರುತ್ತಿಲ್ಲ

  • ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ : ಜಲಮಂಡಳಿ

‘ಬಂಗಾರಪ್ಪನಗರ ವ್ಯಾಪ್ತಿಯಲ್ಲಿ 2 ಸಾವಿರ ಲೀಟರ್‌ ಸಾಮರ್ಥ್ಯದ 4 ಸಿಂಟೆಕ್ಸ್ ನೀರಿನ ಟ್ಯಾಂಕ್ ಇರಿಸಲಾಗಿದ್ದು. ನಿತ್ಯ ಒಂದು ಲಾರಿಯಲ್ಲಿ ನೀರು ತಂದು ಟ್ಯಾಂಕ್‌ಗಳಿಗೆ ತುಂಬಿಸಲಾಗುತ್ತಿದೆ’ ಎಂದು ಜಲಮಂಡಳಿ ಆರ್.ಆರ್.ನಗರ ವಿಭಾಗದ ಸಹಾಯಕ ಎಂಜಿನಿಯರ್ ಕೆ.ಕಾವ್ಯ ಹೇಳಿದರು.

ಜಲಮಂಡಲಿ ಕೊಳವೆಬಾವಿ ವಿಭಾಗದ ಸಹಾಯಕ ಎಂಜಿನಿಯರ್ ರವಿಚಂದ್ರ, ‘ಈ ವ್ಯಾಪ್ತಿಯಲ್ಲಿ 14 ಕೊಳವೆಬಾವಿಗಳಿದ್ದು, ಆರರಲ್ಲಿ ಮಾತ್ರ ಸಣ್ಣಪ್ರಮಾಣದಲ್ಲಿ ನೀರು ಬರುತ್ತಿದ್ದು, ನೀರಿನ ಸಮಸ್ಯೆ ತಲೆದೋರಿದೆ. ಹೆಚ್ಚುವರಿ ಕೊಳವೆ ಕೊರೆಸಲು ಟೆಂಡರ್ ಪ್ರಕ್ರಿಯೆಯಲ್ಲಿದೆ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT