ಬೆಂಗಳೂರು: ‘ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ (ಆರ್ ಅಂಡ್ ಡಿ) ಭಾರತವು ಬೇರೆ ದೇಶಗಳನ್ನು ಅವಲಂಬಿಸಿದೆ. ಇಲ್ಲಿ ಮೂಲ ಸಂಶೋಧನೆಗಳು ನಡೆಯುತ್ತಿಲ್ಲ. ಬದಲಿಗೆ ನಕಲು ಮಾಡುತ್ತಿದ್ದೇವೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕಾರಿಣಿ ಸದಸ್ಯ ಹಾಗೂ ಲೇಖಕ ರಾಮ್ ಮಾಧವ್ ಹೇಳಿದರು.

ಥಿಂಕರ್ಸ್ ಫೋರಂ ನಗರದಲ್ಲಿ ಶನಿವಾರ ರಾಮ್ ಮಾಧವ್ ಅವರ ‘ದಿ ನ್ಯೂ ವರ್ಲ್ಡ್’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಿತ್ತು. ಪುಸ್ತಕ ಬಿಡುಗಡೆಯ ನಂತರ ಮಾತನಾಡಿದ ರಾಮ್ ಮಾಧವ್, ‘ಸೆಮಿಕಂಡಕ್ಟರ್ ಸಂಶೋಧನೆ ಮತ್ತು ತಯಾರಿಕೆಯಲ್ಲಿ ಒಟ್ಟು 8 ಹಂತಗಳಿವೆ. ನಾವು ಅದರಲ್ಲಿ ಮೊದಲ ಹಂತವನ್ನೂ ತಲುಪಿಲ್ಲ’ ಎಂದರು.

‘ಸೆಮಿಕಂಡಕ್ಟರ್ನ ನ್ಯಾನೊ ಚಿಪ್ಗಳನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ. ಆದರೆ ಅವುಗಳ ವಿನ್ಯಾಸ ಬೇರೆ ದೇಶಗಳದ್ದು. ಆರ್ ಅಂಡ್ ಡಿ ನಾವು ಮಾಡುತ್ತಿರುವ ವೆಚ್ಚಕ್ಕಿಂತ, ಚೀನಾವು 25 ಪಟ್ಟು ಹೆಚ್ಚು ಮಾಡುತ್ತಿದೆ. ನಾವು ಬೇರೆಯವರನ್ನು ನಕಲು ಮಾಡುವ ಬದಲು, ಮೂಲ ಸಂಶೋಧನೆ ನಡೆಸಬೇಕು’ ಎಂದರು.

‘ಜಗತ್ತು ಬಹಳ ವೇಗವಾಗಿ ಮುನ್ನಡೆಯುತ್ತಿದೆ. ಅದು ಯಾವ ಕಡೆ ಹೋಗುತ್ತದೆ ಎಂಬುದನ್ನು ಅರ್ಥೈಸಿಕೊಂಡು ನಾವು ಕಾರ್ಯನಿರ್ವಹಿಸಬೇಕಾದ ಆವಶ್ಯಕತೆಯಿದೆ’ ಎಂದರು.

ಬೆಂಗಳೂರು ತಂತ್ರಜ್ಞಾನ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ಸಿಲಿಕಾನ್ ಸಿಟಿ ಎಂದು ಕರೆಸಿಕೊಳ್ಳುತ್ತದೆ. ಆದರೆ ಇಲ್ಲಿಯೂ ಮೂಲ ಸಂಶೋಧನೆಗಳಾಗುತ್ತಿಲ್ಲ
ರಾಮ್ ಮಾಧವ್ ಆರ್ಎಸ್ಎಸ್ ಕಾರ್ಯಕಾರಿಣಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.