ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಸರ್ಕಾರ ಸಬಲೀಕರಣಕ್ಕೆ ಆದ್ಯತೆ ನೀಡಿದ್ದ ರಾಮಕೃಷ್ಣ ಹೆಗಡೆ: ಮಹಿಮ ಜೆ. ಪಟೇಲ್

Last Updated 29 ಆಗಸ್ಟ್ 2020, 20:39 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಎನ್ನುವುದಕ್ಕಿಂತ ಗ್ರಾಮ ಸರ್ಕಾರಗಳ ಸಬಲೀಕರಣಕ್ಕೆ ರಾಮಕೃಷ್ಣ ಹೆಗಡೆ ಮಹತ್ವ ನೀಡಿದ್ದರು. ಗ್ರಾಮ ಸ್ವರಾಜ್ಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಂಯುಕ್ತ ಜನತಾದಳ ಪಕ್ಷದಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಜೆ. ಪಟೇಲ್ ಹೇಳಿದರು.

ದಿವಂಗತ ರಾಮಕೃಷ್ಣ ಹೆಗಡೆಯವರ 94ನೇ ಜನ್ಮ ದಿನಾಚರಣೆಯಲ್ಲಿ ಶನಿವಾರ ಮಾತನಾಡಿದ ಅವರು, ‘ಹಳ್ಳಿಗಳ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂಬ ಉದ್ದೇಶದಿಂದ ರಾಜ್ಯದ 6 ಸಾವಿರ ಪಂಚಾಯಿತಿಗಳ ಪೈಕಿ ಕನಿಷ್ಠ 150 ಗ್ರಾಮ ಪಂಚಾಯಿತಿಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಾವಯವ ಕೃಷಿಕರು ಮತ್ತಿತರರ ಜೊತೆ ಸೇರಿಕೊಂಡು ಪಂಚಾಯಿತಿಗಳ ಸಬಲೀಕರಣ ಕುರಿತು ಚರ್ಚಿಸಲಾಗುವುದು’ ಎಂದರು.

‘ಹಿಂದಿನ ಘಟನೆಗಳನ್ನು ಬದಿಗಿಟ್ಟು, ಮುಂದೆ ಆಗಬೇಕಾದುದರ ಕಡೆಗೆ ಪಕ್ಷದ ಕಾರ್ಯಕರ್ತರು ಯೋಚಿಸಬೇಕು. ಪಕ್ಷ ಸಂಘಟನೆಯ ಕಡೆಗೆ ಒತ್ತು ನೀಡಬೇಕು’ ಎಂದು ಹೇಳಿದರು.

‘ರಾಮಕೃಷ್ಣ ಹೆಗಡೆಯವರು ಎತ್ತರದ ಬ್ರಾಹ್ಮಣಿಕೆ ಮಾಡಿದವರು. ಎಲ್ಲರನ್ನೂ ಒಪ್ಪಿಕೊಂಡು, ಎಲ್ಲರನ್ನೂ ಜೊತೆಗೆ ಕರೆದೊಯ್ಯುವ ಬ್ರಾಹ್ಮಣಿಕೆ ಅವರದ್ದಾಗಿತ್ತು’ ಎಂದು ಸ್ಮರಿಸಿಕೊಂಡರು.

ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾ ಪುರದ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ‘ಪ್ರಜಾವಾಣಿ’ ಕಾರ್ಯ
ನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಜೆಡಿಯು ಮುಖಂಡರಾದ ಜಿ.ವಿ. ರಾಮಚಂದ್ರಯ್ಯ, ಟಿ. ಪ್ರಭಾಕರ್, ಪಿ.ಎಸ್. ಪ್ರಕಾಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT