ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬನೇ ರಾಜೀನಾಮೆ ಕೊಟ್ರೆ ಪ್ರಯೋಜನವಿಲ್ಲ, ಗುಂಪಾಗಿ ಕೊಡಬೇಕು: ರಮೇಶ್‌ ಜಾರಕಿಹೊಳಿ

Last Updated 24 ಏಪ್ರಿಲ್ 2019, 12:14 IST
ಅಕ್ಷರ ಗಾತ್ರ

ಬೆಂಗಳೂರು: ‘ಯಾವಾಗ ರಾಜೀನಾಮೆ ನೀಡುತ್ತೇನೆ ಎಂದು ಶೀಘ್ರದಲ್ಲಿಯೇ ತಿಳಿಸುತ್ತೇನೆ. ಆದರೆ ಒಬ್ಬನೇ ರಾಜೀನಾಮೆ ಕೊಟ್ಟರೆ ಏನೂ ಪ್ರಯೋಜನವಿಲ್ಲ. ಒಂದಿಷ್ಟು ಜನ ಸೇರಿರಾಜೀನಾಮೆ ನೀಡುತ್ತೇವೆ’ ಎಂದು ರಮೇಶ್‌ ಜಾರಕಿಹೊಳಿ ಬಂಡಾಯದ ವರಸೆ ಮುಂದುವರೆಸಿದ್ದಾರೆ.

ಬುಧವಾರ ಬೆಂಗಳೂರಿಗೆ ಬಂದಿರುವ ರಮೇಶ್‌ ಅವರು ಸೆವೆನ್‌ ಮಿನಿಸ್ಟರ್‌ ಕ್ವಾಟ್ರಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

‘ರಾಜೀನಾಮೆ ಕೊಡುವುದಂತು ಸತ್ಯ. ಪಕ್ಷದಲ್ಲಿ ಇನ್ನೂ ಕೆಲವರ ಜೊತೆ ಚರ್ಚೆ ಮಾಡಬೇಕಿದೆ. ಅವರೊಂದಿಗೆ ಮಾತನಾಡಿ ರಾಜೀನಾಮೆ ಯಾವಾಗ ನೀಡುವೆ ಎಂದು ತಿಳಿಸುವೆ’ ಎಂದರು.

‘ಡಿ.ಕೆ.ಶಿವಕುಮಾರ್‌ ನನ್ನ ಲೆವಲ್‌ ಅಲ್ಲ. ಎಲ್ಲಾ ಅವನೇ ಹೇಳಿಕೊಳ್ಳುತ್ತಾನೆ.ನನ್ನ ಲೀಡರ್‌ ಏನಿದ್ರು ರಾಹುಲ್‌ ಗಾಂಧಿ. ಅವರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT