ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯದಿಂದ ಸಂವಿಧಾನ ಅಂಶ ಕಡಿತ ಬೇಡ: ಒತ್ತಾಯ

Last Updated 31 ಜುಲೈ 2020, 20:42 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಕಾರಣದಿಂದ ಪಠ್ಯ ಪರಿಷ್ಕರಣೆ ವೇಳೆ ಯಾವ ಕಾರಣಕ್ಕೂ ಸಂವಿಧಾನದ ವಿಚಾರಗಳನ್ನು ಕೈಬಿಡಬಾರದು ಎಂದು ‘ಸಂವಿಧಾನ ಓದು ಅಭಿಯಾನ ಸಮಿತಿ’ ಆಗ್ರಹಿಸಿದೆ.

ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ಸಮಿತಿ, 'ವಿಷಯ ತಜ್ಞರ ಅಭಿಪ್ರಾಯ ಪಡೆದೇ ಪಠ್ಯ ಕಡಿತ ಮಾಡಬೇಕು. ಅಲ್ಲಿ ಪಾರದರ್ಶಕತೆ ಉಳಿಸಿಕೊಳ್ಳಬೇಕು' ಎಂದು
ಒತ್ತಾಯಿಸಿದೆ.

'ಸ್ವಾತಂತ್ರ ಹೋರಾಟಗಾರರಾದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಹೈದರಾಲಿ, ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ ಅವರಂತಹ ವೀರರ ಚರಿತ್ರೆ ಮಕ್ಕಳಿಗೆ ಸಿಗಬೇಕು. ಇಲ್ಲದಿದ್ದರೆ ದೇಶದ ನಿಜವಾದ ಚರಿತ್ರೆಯ ಅರಿವಿಲ್ಲದ ಸ್ಥಿತಿಯಲ್ಲಿ ನಮ್ಮ ಮುಂದಿನ ಜನಾಂಗ ರೂಪುಗೊಳ್ಳಲಿದೆ. ಹಾಗಾಗಿ, ಆ ಅಂಶಗಳನ್ನು ಮೊದಲಿ ನಂತೆಯೇ ಪಠ್ಯಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು' ಎಂದು ವಿನಂತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT