ಬುಧವಾರ, ಸೆಪ್ಟೆಂಬರ್ 29, 2021
20 °C

ಯಡಿಯೂರಪ್ಪ ಸರ್ಕಾರದಲ್ಲಿದ್ದ ಆಪ್ತ ಕಾರ್ಯದರ್ಶಿಗಳು ಕರ್ತವ್ಯದಿಂದ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯಡಿಯೂರಪ್ಪ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳು, ಸಚಿವರಿಗೆ ಆಪ್ತ ಕಾರ್ಯದರ್ಶಿ ಮತ್ತು ವಿಶೇಷ ಕರ್ತವ್ಯಾಧಿಕಾರಿಗಳಾಗಿದ್ದ ಕೆಎಎಸ್‌ ಅಧಿಕಾರಿಗಳು ಮತ್ತು ನಿವೃತ್ತ ಕೆಎಎಸ್‌ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ.

ವಿವಿಧ ಸಚಿವರ ಜತೆಗಿದ್ದ ಕೆಎಎಸ್‌ ಅಧಿಕಾರಿಗಳಾದ ಪ್ರಕಾಶ್‌.ಜಿ.ಟಿ ನಿಟ್ಟಾಲಿ, ಪ್ರಶಾಂತ್‌ ಆರ್‌.ಕೆ, ಯೋಗೀಶ್‌.ಟಿ, ಸತೀಶ್‌ಕುಮಾರ್‌, ರಾಘವೇಂದ್ರ ಟಿ, ಬಿ.ಉದಯಕುಮಾರ್ ಶೆಟ್ಟಿ, ರವಿ ಎಂ ತಿರ್ಲಾಪುರ, ನಾಗರಾಜು ಸಿ, ಸಿದ್ರಾಮಪ್ಪ ಶ್ರೀಶೈಲ ಬಿರಾದಾರ, ಮಂಜುನಾಥ ಸಿ.ಎನ್‌, ಸೂರಜ್‌ ಎ.ಆರ್‌ ಮತ್ತು ಕ್ಯಾಪ್ಟನ್‌ ಶ್ರೀನಿವಾಸಗೌಡ.

ನಿವೃತ್ತ ಕೆಎಎಸ್ ಅಧಿಕಾರಿಗಳಾದ ವಿಜಯಕುಮಾರ್‌ ಎನ್‌ ತೋರಗಲ್, ಜಿ.ಜಯರಾಮ್‌ ಮತ್ತು ಎ.ವಿ.ಪ್ರಸನ್ನ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಸೇವೆಯಲ್ಲಿರುವ ಅಧಿಕಾರಿಗಳು ಮುಂದಿನ ಸ್ಥಳ ನಿಯುಕ್ತಿಗಾಗಿ ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆಯಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು