ರೇಣುಕಸ್ವಾಮಿ ಅವರ ಕೊಲೆ ನಡೆದ ಸ್ಥಳ, ಮೃತದೇಹ ಎಸೆದ ಕಾಲುವೆ ಬಳಿ ಹಾಗೂ ಆರೋಪಿಗಳ ಮನೆಗಳಲ್ಲಿ ಎಫ್‌ಎಸ್‌ಎಲ್ ತಜ್ಞರು ಹಲವು ಮಾದರಿ ಸಂಗ್ರಹಿಸಿದ್ದರು. ಆರೋಪಿಗಳ ಮೊಬೈಲ್ ಹಾಗೂ ಸಿ.ಸಿ.ಟಿ.ವಿ ಡಿವಿಆರ್‌ನಿಂದ ಅಳಿಸಿ ಹಾಕಿದ್ದ ದತ್ತಾಂಶವನ್ನು ಮರು ಸಂಗ್ರಹಿಸಲಾಗಿದೆ. ಎಲ್ಲವನ್ನೂ ಪರೀಕ್ಷಿಸಿ, ವರದಿ ಪಡೆಯಲಾಗಿದೆ ಎಂದು ಹೇಳಿದರು.