ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲ್ಮೆಟ್ ರಹಿತ ಸವಾರಿ: ಜಾಗೃತಿ ಮೂಡಿಸಿದ ಗಣೇಶ ವೇಷಧಾರಿ

Published 22 ಸೆಪ್ಟೆಂಬರ್ 2023, 19:35 IST
Last Updated 22 ಸೆಪ್ಟೆಂಬರ್ 2023, 19:35 IST
ಅಕ್ಷರ ಗಾತ್ರ

ಬೆಂಗಳೂರು: ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಸವಾರಿ ಮಾಡುವವರನ್ನು ತಡೆದು ನಿಲ್ಲಿಸಿದ ‘ಗಣೇಶ’ ವೇಷಧಾರಿ, ರಸ್ತೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು.

ನಗರದಲ್ಲಿ ‘ಎರಡನೇ ಅವಕಾಶ ಮತ್ತೆ ಸಿಗದು’ ಹೆಸರಿನಲ್ಲಿ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದ ರೆಡ್ ಎಫ್‌.ಎಂ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು, ಹಲವು ರಸ್ತೆಗಳಲ್ಲಿ ಸಂಚರಿಸಿ ಜನರಿಗೆ ಸುರಕ್ಷತಾ ನಿಯಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

‘ಗಣೇಶ’ ರೀತಿಯಲ್ಲಿ ವೇಷಭೂಷಣ ತೊಟ್ಟಿದ್ದ ಕಲಾವಿದರೊಬ್ಬರು, ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನಗಳಲ್ಲಿ ಹೊರಟಿದ್ದವರನ್ನು ತಡೆದು ನಿಲ್ಲಿಸಿದರು. ‘ಹೆಲ್ಮೆಟ್‌ ಏಕೆ ಧರಿಸಬೇಕು. ಅದರಿಂದ ಉಪಯೋಗವೇನು’ ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ವಿವರಣೆ ನೀಡಿದರು.

ಅಭಿಯಾನದಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿ ಹಾಗೂ ಪೊಲೀಸರು, ಜಾಗೃತಿ ಫಲಕಗಳನ್ನು ಪ್ರದರ್ಶಿಸಿದರು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಮುರುಗೇಶಪಾಳ್ಯ, ಕುಂದಲಹಳ್ಳಿ ಸಿಗ್ನಲ್, ಕಾರ್ಪೊರೇಷನ್ ವೃತ್ತ, ಚಾಲುಕ್ಯ ವೃತ್ತ, ಸೌತ್ ಎಂಡ್ ವೃತ್ತ, ಬಾಣಸವಾಡಿ ಹಾಗೂ ಕೋರಮಂಗಲ ಸೋನಿ ಸಿಗ್ನಲ್‌ ಹಾಗೂ ಸುತ್ತಮುತ್ತ ಅಭಿಯಾನ ನಡೆಯಿತು. ಸೆ. 14ರಿಂದ ಅಭಿಯಾನ ಆರಂಭವಾಗಿದ್ದು, ಸೆ. 23ರಂದು ಸಮಾಪ್ತಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT