ಬೆಂಗಳೂರು: ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲಿ ಮುನಿಯಪ್ಪ ಎಂಬುವರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಲಾಂಗ್ ತೋರಿಸಿ ₹35 ಸಾವಿರ ಸುಲಿಗೆ ಮಾಡಿದ್ದಾರೆ.

ಘಟನೆ ಸಂಬಂಧ ಮುನಿಯಪ್ಪ ಠಾಣೆಗೆ ದೂರು ನೀಡಿದ್ದಾರೆ. ನಾಲ್ವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಕಬ್ಬಿಣದ ಕಂಬಿ ವ್ಯಾಪಾರ ಮಾಡುವ ಮುನಿಯಪ್ಪ ಮೇ 13ರಂದು ಕೆಲಸಗಾರರಿಗೆ ನೀಡಲೆಂದು ₹35 ಸಾವಿರ ತೆಗೆದುಕೊಂಡು ಯಲಹಂಕ ಬಳಿ ಹೊರಟಿದ್ದರು. ಎರಡು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಮುನಿಯಪ್ಪ ಅವರನ್ನು ಅಡ್ಡಗಟ್ಟಿ ಸುತ್ತುವರೆದಿದ್ದರು’ ಎಂದು ಪೊಲೀಸರು ಹೇಳಿದರು.

‘ಮುನಿಯಪ್ಪ ಅವರ ಹೊಟ್ಟೆ ಮೇಲೆಯೇ ಲಾಂಗ್ ಇಟ್ಟಿದ್ದ ಆರೋಪಿಗಳು, ಹಣ ಕೊಡದಿದ್ದರೆ ಸ್ಥಳದಲ್ಲೇ ಕೊಚ್ಚಿ ಹಾಕುವುದಾಗಿ ಬೆದರಿಸಿದ್ದರು. ನಂತರ, ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.