ಬೆಂಗಳೂರು: ವಾಯುವಿಹಾರ ಮಾಡುತ್ತಿದ್ದ ಯುವಕನಿಗೆ ಲಾಂಗ್ ತೋರಿಸಿ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಕಳ್ಳರನ್ನು ಹಿಡಿಯಲು ನಗರ ಪಾಲಿಕೆ ಮಾಜಿ ಸದಸ್ಯರೊಬ್ಬರು ಯತ್ನಿಸಿದ್ದಾರೆ.

ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಎಚ್.ಆರ್.ಬಿ.ಆರ್ ಲೇಔಟ್ನ ದಾರಿಯಲ್ಲಿ ವಾಯುವಿಹಾರ ಮಾಡುತ್ತಿದ್ದ ಯುವಕನನ್ನು ಬೆದರಿಸಿ, ಮೊಬೈಲ್ ಕಸಿದು ಪರಾರಿಯಾಗುತ್ತಿದ್ದರು. ಆ ವೇಳೆ ಜಿಮ್ಗೆ ಹೊರಟಿದ್ದ ನಗರ ಪಾಲಿಕೆ ಮಾಜಿ ಸದಸ್ಯ ಗಣೇಶ್ ರೆಡ್ಡಿ ಅವರು, ತಮ್ಮ ಸ್ಕಾರ್ಪಿಯೊ ವಾಹನದಲ್ಲಿ ಕಳ್ಳರ ಬೈಕ್ ಹಿಂಬಾಲಿಸಿಕೊಂಡು ಹೋಗಿ ಗುದ್ದಿದ್ದಾರೆ.

ಕೆಳಗೆ ಬಿದ್ದ ಕಳ್ಳರು ಬೈಕ್ ಬಿಟ್ಟು ಓಡಿದರು. ಐದು ನಿಮಿಷದ ಬಳಿಕ ಮತ್ತೆ ವಾಪಸ್ ಬಂದು, ಲಾಂಗ್ ತೋರಿಸಿ ಬೆದರಿಸಿ, ಮೊಬೈಲ್ ಎಸೆದು ಬೈಕ್ ತೆಗೆದುಕೊಂಡು ಹೋದರು.

ಈ ಎಲ್ಲಾ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.