ರಾಜರಾಜೇಶ್ವರಿನಗರ: ಅನಧಿಕೃತವಾಗಿ ಪ್ಲಾಸ್ಟಿಕ್ ಕವರ್ ತಯಾರಿಸುತ್ತಿದ್ದ ಘಟಕಗಳ ಮೇಲೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಶುಕ್ರವಾರ ದಾಳಿ ನಡೆಸಿದರು.

ಕೊಟ್ಟಿಗೇಪಾಳ್ಯ ವಾರ್ಡ್‍ನ ಮಾರ್ಕಂಡೇಯನಗರ, ಶ್ರೀನಿವಾಸ ನಗರದಲ್ಲಿ ವಿಶ್ವಾಸ್ ಮತ್ತು ಚಂದ್ರಶೇಖರ ಅಯ್ಯರ್ ಎಂಬುವವರು ಅನಧಿಕೃತವಾಗಿ ನಡೆಸುತ್ತಿದ್ದ ಘಟಕದ ಮೇಲೆಆರೋಗ್ಯಾಧಿಕಾರಿ ಡಾ.ಕೋಮಲ ನೇತೃತ್ವದಲ್ಲಿ ಆರೋಗ್ಯ ಪರಿವೀಕ್ಷಕರಾದ ಕೆ.ಶಿವಲಿಂಗಯ್ಯ, ನಂಜುಂಡಯ್ಯ, ಡಿ.ಎಲ್.ನಾರಾಯಣ್ ದಾಳಿ ನಡೆಸಿ 500 ಕೆಜಿ ಪ್ಲಾಸ್ಟಿಕ್ ಕವರ್ ವಶಪಡಿಸಿಕೊಂಡರು.

ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ₹ 30 ಸಾವಿರ ದಂಡ ವಿಧಿಸಿದರು. ಅಲ್ಲದೇ ಘಟಕಕ್ಕೆ ಬೀಗ ಹಾಕಿದರು.

ಹೋಟೆಲ್, ಮಾಲ್, ತರಕಾರಿ ಅಂಗಡಿ, ದಿನಸಿ ಅಂಗಡಿ, ತಳ್ಳುವಗಾಡಿ, ಬಟ್ಟೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಬ್ಯಾಗ್ ಕಂಡುಬಂದರೆ ಅಂಗಡಿ ಮುಚ್ಚಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.