ಶುಕ್ರವಾರ, ಆಗಸ್ಟ್ 12, 2022
20 °C

ಅನುಮಾನಾಸ್ಪದ ಕಾರಿನಲ್ಲಿ ₹65 ಲಕ್ಷ; ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು; ಸಿಟಿ‌ ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾರೊಂದನ್ನು ಪೊಲೀಸರು ತಡೆದು ತಪಾಸಣೆ ಮಾಡಿದ್ದು, ಕಾರಿನಲ್ಲಿದ್ದ ಬ್ಲಾಗ್‌ನಲ್ಲಿ ₹ 65 ಲಕ್ಷ ನಗದು ಪತ್ತೆಯಾಗಿದೆ.

ಆಂಧ್ರಪ್ರದೇಶ ನೋಂದಣಿ ಸಂಖ್ಯೆಯ ಕಾರಿನಲ್ಲಿ ಮೂವರು ಆರೋಪಿಗಳು ಇದ್ದರು‌. ಅವರೇ ಹಣ ಸಾಗಿಸುತ್ತಿದ್ದರು. ಅವರನ್ನೂ ಪೊಲೀಸರು ಬಂಧಿಸಿದ್ದಾರೆ.

'ಅಂಧ್ರಪ್ರದೇಶದ ದಸ್ತಗೀರ್ (41), ಕಿರಣ್‌ಕುಮಾರ್ (30) ಹಾಗೂ ಮಸ್ತಾನ್ (30) ಬಂಧಿತರು. ಅವರಿಂದ ₹500 ಹಾಗೂ ₹2000 ಮುಖಬೆಲೆಯ ನೋಟುಗಳಿರುವ ₹65 ಲಕ್ಷ ನಗದು ಜಪ್ತಿ ಮಾಡಲಾಗಿದೆ' ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದ್ದಾರೆ.

'ಹಣದ ಬಗ್ಗೆ ಆರೋಪಿಗಳು ಯಾವುದೇ ದಾಖಲೆ ನೀಡಿಲ್ಲ. ಎಲ್ಲಿಯೋ ಕಳವು ಮಾಡಿದ ಹಣವನ್ನು ಆರೋಪಿಗಳು ಸಾಗಣೆ  ಮಾಡುತ್ತಿದ್ದ ಅನುಮಾನವಿದೆ. ಸಿಟಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆಂಧ್ರಪ್ರದೇಶ ಪೊಲೀಸರಿಗೂ ಮಾಹಿತಿ ನೀಡಲಾಗಿದೆ' ಎಂದೂ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು