ಬೆಂಗಳೂರು: ಪಶ್ಚಿಮ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಕಾರ್ಯಾಚರಣೆಯಲ್ಲಿ 16 ಆರೋಪಿಗಳನ್ನು ಬಂಧಿಸಿ, ₹ 64.21 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡ ಲಾಗಿದೆ.

619 ಗ್ರಾಂ ಚಿನ್ನಾಭರಣ, 30 ಗ್ರಾಂ ಬೆಳ್ಳಿಯ ಆಭರಣ, ವಿವಿಧ ಕಂಪನಿಗಳ 210 ಮೊಬೈಲ್, 9 ದ್ವಿಚಕ್ರ ವಾಹನ ಗಳು, 3 ಸೈಕಲ್, 1 ಆಟೊ ಹಾಗೂ ಎರಡು ವಾಚ್ ವಶಪಡಿಸಿಕೊಳ್ಳಲಾಗಿದೆ.

‘ಮನೆ ಬೀಗ ಒಡೆದು ಚಿನ್ನಾ ಭರಣ ಕಳವು, ದೇವರ ವಿಗ್ರಹದ ಚಿನ್ನದ ಸರ ಕಳವು, ಅಂಗಡಿಯ ಬೀಗ ಒಡೆದು ನಗದು, ಸಾಮಗ್ರಿ ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮಾಗಡಿ ರಸ್ತೆ ಸುಮ್ಮನಹಳ್ಳಿ ಜಂಕ್ಷನ್ ರಿಂಗ್ ರಸ್ತೆಯಲ್ಲಿ ಲಾರಿ ಹಾಗೂ ಬಸ್ಗಳನ್ನು ನಿಲ್ಲಿಸಿಕೊಂಡು ಚಾಲಕರು ಹಾಗೂ ಕ್ಲೀನರ್ ವಿಶ್ರಾಂತಿ ಪಡೆಯುತ್ತಿದ್ದರು. ಅಲ್ಲಿಗೆ ನಾಲ್ವರು ಆರೋಪಿಗಳು ಬಂದು ಲಾಂಗ್ ತೋರಿಸಿ ಬೆದರಿಸಿ ನಗದು,ಮೊಬೈಲ್ ಕಸಿದು ಪರಾರಿಯಾಗಿದ್ದರು. ಆ ನಾಲ್ವರು ಆರೋಪಿಗಳನ್ನೂ ಪತ್ತೆ ಮಾಡಿ ಬಂಧಿಸಲಾಗಿದೆ. ಬಂಧಿತರಿಂದ ₹ 2.50 ಲಕ್ಷದ ಮೊಬೈಲ್ ಹಾಗೂ ಮೂರು ಬೈಕ್ ವಶಕ್ಕೆ ಪಡೆಯಲಾಗಿದೆ. ಬಿಲ್ ಕಲೆಕ್ಷನ್ ವ್ಯಕ್ತಿಗೆ ಚಾಕುವಿನಿಂದ ಇರಿದು ಹಣವಿದ್ದ ಬ್ಯಾಗ್ ಅಪಹರಿಸಿ ಪರಾರಿ ಆಗಿದ್ದನನ್ನು ಬಂಧಿಸಲಾಗಿದೆ’ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.