ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ರಷ್ಯಾ ಅಧ್ಯಯನ ಕೇಂದ್ರ ಸ್ಥಾಪಿಸಲು ಕ್ರಮವಹಿಸುವುದಾಗಿ ಭಾರತದಲ್ಲಿನ ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್ ತಿಳಿಸಿದರು.

ರಷ್ಯಾ ರಾಯಭಾರ ಕಚೇರಿಯ ಕೌನ್ಸೆಲರ್ ಡಾ.ಎಲೆನ್ ರೆಮಝೋವಾ ಹಾಗೂ ಚೆನ್ನೈನಲ್ಲಿರುವ ರಷ್ಯಾ ಕಾನ್ಸುಲೇಟ್ ಕಚೇರಿಯ ಇಬ್ಬರು ಅಧಿಕಾರಿಗಳೊಂದಿಗೆ ನಗರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕುಲಪತಿ, ಕುಲಸಚಿವರೊಂದಿಗೆ ಶೈಕ್ಷಣಿಕ ಮತ್ತು ಸಂಶೋಧನೆಯ ಸಹಭಾಗಿತ್ವ ಕುರಿತು ಚರ್ಚಿಸುವ ವೇಳೆ, ಈ ವಿಷಯವನ್ನು ಪ್ರಸ್ತಾಪಿಸಿದರು.

ನಂತರ ವಿಶ್ವವಿದ್ಯಾಲಯದ ಸಹಭಾಗಿತ್ವದೊಂದಿಗೆ ಕೈಗೊಳ್ಳಬಹುದಾದ ವಿಷಯಗಳ ಮತ್ತು ಕೋರ್ಸ್ಗಳ ಕುರಿತು ವಿವರಣೆ ನೀಡಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಅವರು, ಬೇರೆ ಬೇರೆ ರಾಷ್ಟ್ರಗಳು ಮತ್ತು ವಿಶ್ವವಿದ್ಯಾಲಯದ ನಡುವಿರುವ ಶಿಕ್ಷಣ, ಸಂಶೋಧನೆ, ಆರೋಗ್ಯ, ವ್ಯವಹಾರ, ಕೌಶಲ ಸಹಯೋಗ ಮತ್ತು ಸಹಕಾರವನ್ನು ವಿವರಿಸಿದರು.

ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ ರಷ್ಯಾ ಭಾಷೆ ಸೇರಿದಂತೆ 14 ಜಾಗತಿಕ ಭಾಷಾ ಕೋರ್ಸ್ಗಳಿರುವ ಕುರಿತು ಅತಿಥಿಗಳಿಗೆ ಮಾಹಿತಿ ನೀಡಿದರು. ಜಪಾನ್, ಸ್ಪೇನ್, ಇಟಲಿ ಮತ್ತು ಫ್ರಾನ್ಸ್ ರಾಯಭಾರ ಕಚೇರಿಗಳು ಮತ್ತು ಸರ್ಕಾರದ ನಡುವಿನ ಒಪ್ಪಂದದ ಕುರಿತು ಮಾಹಿತಿ ಹಂಚಿಕೊಂಡರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವರು, ವಿತ್ತಾಧಿಕಾರಿ, ನಿಕಾಯದ ಡೀನ್ ಹಾಗೂ ವಿಭಾಗಗಳ ಮುಖ್ಯಸ್ಥರು ಚರ್ಚೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.