ಬೆಂಗಳೂರು: ನಗರದ ಹಲವು ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ದೊಡ್ಡ ಮೊತ್ತದ ವೇತನ ಒಳಗೊಂಡ ಉದ್ಯೋಗದ ಅವಕಾಶ ಪಡೆದಿದ್ದು, ಆರ್‌ವಿ ಕಾಲೇಜಿನ ರಕ್ಷಿತ್ ದತ್ತಾತ್ರೇಯ ಹೆಗಡೆ ಅವರಿಗೆ ವಾರ್ಷಿಕ ₹ 90 ಲಕ್ಷ ವೇತನದ ಅವಕಾಶ ದೊರೆತಿದೆ.

ರಕ್ಷಿತ್ ಮಾಹಿತಿ ವಿಜ್ಞಾನದಲ್ಲಿ ಐದನೇ ಸೆಮಿಸ್ಟರ್ ಓದುತ್ತಿದ್ದಾರೆ. ನ್ಯೂಯಾರ್ಕ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಯುಐಪಾತ್ ಸಾಫ್ಟ್‌ವೇರ್ ಕಂಪನಿ ವಾರ್ಷಿಕ ₹ 90 ಲಕ್ಷ ಉದ್ಯೋಗದ ಪ್ರಸ್ತಾಪ ನೀಡಿದೆ. ಇತರ ಮೂರು ವಿದ್ಯಾರ್ಥಿಗಳಿಗೆ ವಾರ್ಷಿಕ ₹ 65 ಲಕ್ಷ ರೂಪಾಯಿಗಳ ಉದ್ಯೋಗದ ಅವಕಾಶ ದೊರೆತಿದೆ.

‘160ಕ್ಕೂ ಹೆಚ್ಚು ಕಂಪನಿಗಳು ಬಂದಿದ್ದವು. 846 ವಿದ್ಯಾರ್ಥಿಗಳು ಅವಕಾಶ ಪಡೆದಿದ್ದಾರೆ’ ಎಂದು ಆರ್‌ವಿ ಎಂಜಿನಿಯರಿಂಗ್ ಕಾಲೇಜು ಉದ್ಯೋಗ, ತರಬೇತಿ ವಿಭಾಗದ ಡೀನ್ ರಂಗನಾಥ್ ಹೇಳಿದರು.

ಪಿಇಎಸ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬರು ವಾರ್ಷಿಕ ₹ 65 ಲಕ್ಷದ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ’ ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಎಂ.ಆರ್.ದೊರೆಸ್ವಾಮಿ ಪ್ರತಿಕ್ರಿಯಿಸಿದರು.

ದಯಾನಂದ ಸಾಗರ್ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬರು ₹ 40 ಲಕ್ಷದ ಅವಕಾಶ ಪಡೆದಿದ್ದಾರೆ. ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ವಿದ್ಯಾರ್ಥಿಯೊಬ್ಬರು ಕ್ಯಾಲಿಫೋರ್ನಿಯಾದ ಸೈಬರ್ ಭದ್ರತಾ ಕಂಪನಿಯಲ್ಲಿ ವಾರ್ಷಿಕ ₹ 58 ಲಕ್ಷ ರೂಪಾಯಿ ವೇತನದ ಪ್ಯಾಕೇಜ್ ದೊರೆತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.