ಬೆಂಗಳೂರು: ನಗರದಲ್ಲಿ ಕನಕ ಆಫೀಸರ್ಸ್ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ‘ಕನಕ ಚೇತನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ರಂಗಮಂಜು (24ನೇ ರ್ಯಾಂಕ್), ಆನಂದಕುಮಾರ್ (41ನೇ ರ್ಯಾಂಕ್), ಭಾನುಪ್ರಕಾಶ್ (523ನೇ ರ್ಯಾಂಕ್), ಪಾಂಡುರಂಗ ಎಸ್.ಕಂಬಳಿ (529ನೇ ರ್ಯಾಂಕ್), ಬೀರಪ್ಪ ಡೋಣೆ (551ನೇ ರ್ಯಾಂಕ್), ಸಂಜಯ್ ಕೌಜಲಗಿ (691ನೇ ರ್ಯಾಂಕ್), ಹನುಮಂತಪ್ಪ ನಂದಿ (910ನೇ ರ್ಯಾಂಕ್) ಹಾಗೂ ಮುಖ್ಯಮಂತ್ರಿ ಪದಕ ಪುರಸ್ಕೃತ ಅಧಿಕಾರಿಗಳನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಆಡಳಿತ, ಶಿಕ್ಷಣ, ವೈದ್ಯಕೀಯ, ಸಹಕಾರ, ಉದ್ಯಮ, ಮಾಧ್ಯಮ, ಮಹಿಳಾ, ಯುವ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 50 ಮಂದಿಗೆ ‘ಕನಕ ಚೇತನ’ ಪ್ರಶಸ್ತಿಯನ್ನು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರು ಪ್ರದಾನ ಮಾಡಿದರು.

ಇನ್ಸೈಟ್ ಐಎಎಸ್ ತರಬೇತಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜಿ.ಬಿ.ವಿನಯಕುಮಾರ್ ಮಾತನಾಡಿದರು. ಕನಕ ಸಿರಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕೇಂದ್ರ ಸ್ಥಾನಿಕ ಅಧಿಕಾರಿ ಲೋಕೇಶ್, ಕಾಳಿದಾಸ ಬ್ಯಾಂಕ್ನ ಕೃಷ್ಣಪ್ರಸಾದ್, ಉದ್ಯಮಿ ಅಣ್ಣಪ್ಪ ಸಾಹುಕಾರ್, ಡಿಐಜಿ ಬಸವರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸಿದ್ದರಾಮಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.