ಶನಿವಾರ, ಫೆಬ್ರವರಿ 29, 2020
19 °C
500 ಹಸುಗಳ ತರಿಸಿದ ಬಮೂಲ್, ಶೇ 50ರಷ್ಟು ಸಹಾಯಧನ

ರಾಜ್ಯಕ್ಕೆ ಬಂದ ಸಾಹಿವಾಲ್ ತಳಿ ದನಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‌ಗ್ರಾಹಕರಿಗೆ ಆರೋಗ್ಯಪೂರ್ಣ ದೇಸಿ ಹಾಲು ಪೂರೈಸಲು ಕರ್ನಾಟಕ ಹಾಲು ಮಹಾಮಂಡಳಿ ಹರಿಯಾಣದ ನಾಟಿ ತಳಿಯ ಹಸುಗಳನ್ನು ತರಿಸಿ ರೈತರಿಗೆ ವಿತರಿಸುತ್ತಿದೆ. ಇದಕ್ಕೆ ಸರ್ಕಾರ ಶೇ 50ರಷ್ಟು ಸಹಾಯಧನವನ್ನೂ ನೀಡುತ್ತಿದೆ.

ಗಿರ್ ಮತ್ತು ಸಾಹಿವಾಲ್ ತಳಿಯ 500 ಹಸುಗಳನ್ನು ಬೆಂಗಳೂರು ಹಾಲು ಒಕ್ಕೂಟದಿಂದ ತರಿಸಲಾಗಿದ್ದು, ಕನಕಪುರ ಮತ್ತು ಮಾಗಡಿ ಭಾಗದ ಆಸಕ್ತ ರೈತರಿಗೆ ವಿತರಣೆ ಮಾಡಲಾಗಿದೆ. ಸರಾಸರಿ ₹80 ಸಾವಿರ ಮೌಲ್ಯದ ಈ ಹಸುಗಳನ್ನು ಖರೀದಿಸುವ ರೈತರಿಗೆ ₹40 ಸಾವಿರ ಸಹಾಯಧನ ಸಿಗಲಿದೆ.

‘ರಾಜ್ಯದ ನಾಟಿ ಹಸುಗಳು ಒಂದೂವರೆಯಿಂದ 2ಲೀಟರ್ ಹಾಲು ಕೊಡುತ್ತವೆ. ಸಾಹಿವಾಲ್ ಹಸುಗಳು 10ರಿಂದ 12 ಲೀಟರ್ ಹಾಲು ಕೊಡುತ್ತವೆ. ಎ–2 ಮಾದರಿಯ ಬಿಟಾ–ಕೇಸಿನ್ ಮತ್ತು ಇತರೆ ಪೋಷಕಾಂಶಗಳನ್ನು ಹೊಂದಿದೆ. ಮಕ್ಕಳಿಗೆ ಈ ಹಾಲು ಕುಡಿಸಿದರೆ ಬುದ್ಧಿಶಕ್ತಿ ಹೆಚ್ಚಾಗುತ್ತದೆ’ ಎಂದು ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಖಾಸಗಿಯವರು ಲೀಟರ್‌ಗೆ ₹120ರಿಂದ ₹130 ಪಡೆದು ಮಾರಾಟ ಮಾಡುತ್ತಿದ್ದಾರೆ. ನಾವು ಕಲಬೆರಕೆಗೆ ಅವಕಾಶ ಇಲ್ಲದಂತೆ ಪ್ರತ್ಯೇಕವಾಗಿ ಸಂಸ್ಕರಿಸಿ ಲೀಟರ್‌ಗೆ ₹80ಕ್ಕೆ ಮಾರಾಟ ಮಾಡುತ್ತಿದ್ದೇವೆ’ ಎಂದು ಅವರು ಹೇಳಿದರು.

ದುಬೈನಲ್ಲಿ ನಂದಿನಿ ಉತ್ಪನ್ನಕ್ಕೆ ಬೇಡಿಕೆ: ‘ನಂದಿನಿ ಉತ್ಪನ್ನಗಳಿಗೆ ದುಬೈನಲ್ಲಿ ಬೇಡಿಕೆ ಇದ್ದು, ರಫ್ತು ಮಾಡುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

‘ನಂದಿನಿ ತುಪ್ಪಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂಬ ಮಾಹಿತಿಯನ್ನು ದುಬೈನಲ್ಲಿರುವ ಭಾರತೀಯ ಮೂಲದ ಉದ್ಯಮಿಗಳು ತಿಳಿಸಿದ್ದಾರೆ. ಅವರ ಮೂಲಕವೇ ದುಬೈಗೆ ನಂದಿನಿ ಉತ್ಪನ್ನಗಳನ್ನು ಕಳುಹಿಸಲು ವ್ಯವಹರಿಸಲಾಗುತ್ತಿದೆ’ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು